Site icon PowerTV

ತೂಫಾನ್ ಹೇಳಿಕೆ : ನನ್ನ ಬಳಿ 135 ಶಾಸಕರಿದ್ದಾರೆ ಎಂದ ಡಿಕೆಶಿ

ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರ ಹೆಚ್ಚು ಶಾಸಕರಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಯಾರು ಏನು ಅಭಿಪ್ರಾಯ ಹೇಳಿದ್ದಾರೆ ಗೊತ್ತಿಲ್ಲ. ನನ್ನ ಬಳಿ 135 ಶಾಸಕರು ಇದ್ದಾರೆ. ಪಕ್ಷದ ಅಧ್ಯಕ್ಷನಾಗಿ 135 ಶಾಸಕರನ್ನು ಅರ್ಪಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನ ಫಾರ್ಮ್‌ಹೌಸ್ ಬಳಿ ಡಿ.ಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ. ಆಪ್ತರ ಸಮ್ಮುಖದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶಿವಕುಮಾರ್ ಅವರು ಇದೀಗ ಫಾರ್ಮ್‌ಹೌಸ್‌ನಿಂದ ಹೊರಟಿದ್ದಾರೆ.

ಎಲ್ಲರೂ ಆಸೆ ಪಡಲಿ

ಸಿಎಂ ಹುದ್ದೆಗೆ ಎಲ್ಲರೂ ಆಸೆ ಪಡಲಿ. ನಾವು ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದೇವೆ. ಸಿಎಲ್​ಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. 135 ಶಾಸಕರನ್ನು ಸೋನಿಯಾ ಗಾಂಧಿಗೆ ಅರ್ಪಿಸಿದ್ದೇವೆ ಎಂದು ಡಿ.ಕೆ ಶಿವಕುಮಾರ್​​ ಹೇಳಿದ್ದಾರೆ.

ಡಿಕೆಶಿ ಹುಟ್ಟುಹಬ್ಬಕ್ಕೆ ಮಗಳ ಶುಭಾಶಯ

ಡಿ.ಕೆ ಶಿ​ವಕುಮಾರ್ ಮಗಳು ಐಶ್ವರ್ಯಾ ತಂದೆಯ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಾಶಯ ತಿಳಿಸಿದ್ದಾರೆ. ನಿಮ್ಮಂಥ ತಂದೆಯನ್ನು ಪಡೆದಿದ್ದು ನನ್ನ ಪುಣ್ಯ. ನನ್ನ ಜೀವನದಲ್ಲಿ ನೀವು ಹೀರೋ. ಅಪ್ಪ ಐ ಲವ್​ ಯೂ ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

Exit mobile version