Site icon PowerTV

ನನ್ನ ಬಳಿ ನಂಬರ್ ಇಲ್ಲ, ನಾನು ಏಕಾಂಗಿ : ಟಗರುಗೆ ‘ಟ್ರಬಲ್ ಶೂಟರ್ ಟಕ್ಕರ್’

ಬೆಂಗಳೂರು : ನನ್ನ ಬಳಿ ನಂಬರ್ ಇಲ್ಲ. ಆದರೆ, ನನ್ನ ಅಧ್ಯಕ್ಷತೆಯಲ್ಲಿ ಗೆದ್ದಿರುವ 135 ಶಾಸಕರಿದ್ದಾರೆ ಎಂದು ಟ್ರಬಲ್ ಶೂಟರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಟಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆದ ಮಾತನಾಡಿದ ಅವರು, ನನಗೆ ಯಾವುದೇ ನಂಬರ್ ಇಲ್ಲ. ಆದರೆ ನನ್ನ ಅಧ್ಯಕ್ಷತೆಯಲ್ಲಿ ಆಯ್ಕೆಯಾಗಿರುವ 135 ಶಾಸಕರಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಏಕಾಂಗಿಯಾಗಿದ್ದೇನೆ. ಹಲವು ಸವಾಲುಗಳನ್ನು ಎದುರಿಸಿದ್ದೇನೆ. ನಾನು ಜೈಲಲ್ಲಿ ಇದ್ದಾಗ ಸೋನಿಯಾ ಗಾಂಧಿ ನನ್ನ ಹೆಗಲಿಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿದ್ದರು. ಅದನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ ಎಂದದು ಡಿಕೆಶಿ ತಮ್ಮ ಸಾಮರ್ಥ್ಯ ಏನೆಂದು ಸಾರಿ ಹೇಳಿದ್ದಾರೆ.

ಇದನ್ನೂ ಓದಿ : ಮಲ್ಲಿಕಾರ್ಜುನ್​ ಖರ್ಗೆಗೆ ಒಲಿಯಲಿದೆಯಾ ಸಿಎಂ ಪಟ್ಟ..?

ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಆಯ್ಕೆ ಮಾಡುವುದು ಹೈಕಮಾಂಡ್ ಗೆ ಬಿಡಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಇಂದು ನನ್ನ ಜನ್ಮದಿನ. ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸಲ್ಲ. ಈ ಹಿನ್ನೆಲೆಯಲ್ಲಿ ನನ್ನ ಗುರುಗಳನ್ನು ಭೇಟಿ ಮಾಡಬೇಕಿದೆ. ನಂತರ ದೆಹಲಿಗೆ ತೆರಳಲಿದ್ದೇನೆ ಎಂದು ಹೇಳಿದ್ದಾರೆ. ತುಮಕೂರಿನ ನೊಣವಿನಕೆರೆಗೆ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತ ತೆರಳಿದ್ದಾರೆ.

Exit mobile version