Site icon PowerTV

WOW : ಧ್ರುವ ಸರ್ಜಾ ಮಗಳು ಎಷ್ಟು ಕ್ಯೂಟ್ ನೋಡಿ : ಫೋಟೋ ರಿವೀಲ್

ಬೆಂಗಳೂರು : ಸ್ಯಾಂಡಲ್ ವುಡ್ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಮುದ್ದು ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ.

ಬಾಲ್ಯದ ಗೆಳತಿ ಪ್ರೇರಣಾ ಅವರನ್ನು ಪ್ರೀತಿಸಿ ಮದುವೆಯಾಗಿರುವ ನಟ ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗು ಜನಿಸಿತ್ತು. ಇದೀಗ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗಳ ಮುಖ ರಿವೀಲ್‌ ಮಾಡುವ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ.

ಮಗಳು ಹುಟ್ಟಿದ 7 ತಿಂಗಳ ಬಳಿಕ, ಇದೇ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ದಾರೆ. ಈ ಕುರಿತ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ‘ನನಗೆ ಹುಡ್ಗ ಬೇಕು, ಸ್ವಯಂವರ’ ಏರ್ಪಾಟು ಮಾಡಿ : ನಟಿ ರಮ್ಯಾ

ಅಂದಹಾಗೆ, ಇದು 7 ತಿಂಗಳ ಫೋಟೋವಲ್ಲ, ಮಗುವಿಗೆ ಒಂದು ತಿಂಗಳಾಗಿದ್ದಾಗ ಕ್ಲಿಕ್ ಮಾಡಿದ ಫೋಟೋ ಇದಾಗಿದೆ ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್‌ಡೇಟ್ ಹಂಚಿಕೊಳ್ಳುತ್ತೇನೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಧ್ರುವ ಸರ್ಜಾ ಅವರು ಮಗಳ ಫೋಟೋ ಹಂಚಿಕೊಂಡು ಸರ್​ಪ್ರೈಸ್​ ನೀಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

Exit mobile version