Site icon PowerTV

ಟಾಸ್ ಗೆದ್ದ ಆರ್ ಸಿಬಿ : ಇಂದೇ ನಿರ್ಧಾರವಾಗುತ್ತಾ ಪ್ಲೇ ಆಫ್ ಕನಸು?

ಬೆಂಗಳೂರು : ಐಪಿಎಲ್ ನ 61ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ ಸಿಬಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯುತ್ತಿದೆ.

ಜೈಪುರದಲ್ಲಿ ಆರ್‌ಆರ್ ಮತ್ತು ಆರ್‌ಸಿಬಿ ನಡುವೆ ಇದುವರೆಗೆ 7 ಪಂದ್ಯಗಳು ನಡೆದಿವೆ. ಇದರಲ್ಲಿ ರಾಜಸ್ಥಾನ್ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆರ್ ಸಿಬಿ ಮೂರು ಪಂದ್ಯಗಳನ್ನು ಗೆದ್ದಿದೆ. ಕಳೆದ 10 ವರ್ಷಗಳಿಂದ ಜೈಪುರ ಮೈದಾನದಲ್ಲಿ ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಗೆದ್ದಿಲ್ಲ.

ಈ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 6 ಪಂದ್ಯದಲ್ಲಿ ಸೋತು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನೂ ಸಂಜು ಪಡೆ ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು, 6ರಲ್ಲಿ ಸೋಲು ಕಂಡು 12 ಅಂಕದೊಂದಿಗೆ 5ನೇ ಸ್ಥಾನ ಪಡೆದುಕೊಂಡಿದೆ. ಪ್ಲೇ-ಆಫ್ ಲೆಕ್ಕಾಚಾರ ಹತ್ತಿರದಲ್ಲೇ ಇರುವುದರಿಂದ ಇಂದಿನ ಪಂದ್ಯ ಇಬ್ಬರಿಗೂ ಮಹತ್ವದ್ದಾಗಿದೆ.

ರಾಜಸ್ಥಾನ್ ತಂಡ

ಸಂಜು ಸ್ಯಾಮ್ಸನ್(ನಾಯಕ), ಜೈಸ್ವಾಲ್, ಜೋಸ್ ಬಟ್ಲರ್, ಜೋ ರೂಟ್, ಧ್ರುವ ಜುರೆಲ್, ಹೆಮ್ಮೆಯರ್, ಅಶ್ವಿನ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಆಸಿಫ್,

ಬೆಂಗಳೂರು ತಂಡ

ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಅನುಜ್ ರಾವತ್, ಮ್ಯಾಕ್ಸ್‌ವೆಲ್, ಲೊಟ್ರೋರ್, ಕಾರ್ತಿಕ್, ಮೈಕೆಲ್ ಬ್ರೇಸ್‌ವೆಲ್, ವೇಯ್ ಪಾರ್ನೆಲ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಸಿರಾಜ್

Exit mobile version