Site icon PowerTV

ರಾಜಕೀಯಕ್ಕೆ ಗುಡ್​ ಬೈ ಹೇಳಿದ ರೇಣುಕಾಚಾರ್ಯ

ದಾವಣಗೆರೆ : ರಾಜ್ಯ ವಿಧಾನಸಭಾ ಚುನುವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ 134ಕ್ಕೂ ಹೆಚ್ಚಿನ ಬಹುಮತ ಪಡೆದು ವಿಜಯಶಾಲಿಯಾಗಿದೆ ಇನ್ನೂ ಈ ಭಾರೀ ಹೀನಾಯವಾಗಿ ಬಿಜೆಪಿ ಪಕ್ಷ ಸೋಲುಂಡು ಬಿಜೆಪಿ ನಾಯಕರು ನಿರಾಸೆಯಾಗಿದ್ದಾರೆ.

ಹೌದು, ಹೊನ್ನಾಳಿಯಲ್ಲಿ ಕಡಿಮೆ ಮತದಿಂದ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ  ಎಂ.ಪಿ ರೇಣುಕಾಚಾರ್ಯ (MP Renukacharya) ರಾಜೀನಾಮೇ ಘೋಷಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ, ಕೋವಿಡ್‍ನಲ್ಲಿ ಜೀವ ಹಂಗು ತೊರೆದರೂ ಜನರು ಸೋಲಿಸಿದರು. ರಾಜಕೀಯದಿಂದ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ (Election) ಬರುವುದಿಲ್ಲ ಎಂದು ಹೇಳಿದರು.

ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದೆ ಇರುವುದಕ್ಕೆ ರೇಣುಕಾಚಾರ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ನೋವಿನಿಂದ ಕಣ್ಣೀರು ಹಾಕಿದರು.

 

Exit mobile version