Site icon PowerTV

ನಾನು ಸಚಿವ ಸ್ಥಾನ ಆಕಾಂಕ್ಷಿ, ‘ಶ್ರೀರಾಮುಲುರನ್ನೇ ಸೋಲಿಸಿದ್ದೇನೆ’ : ಶಾಸಕ ಬಿ. ನಾಗೇಂದ್ರ

ಬೆಂಗಳೂರು : ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಳ್ಳಾರಿ ಗ್ರಾಮಾಂತರ ನೂತನ ಶಾಸಕ ಬಿ. ನಾಗೇಂದ್ರ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಾನು ಬಿ. ಶ್ರೀರಾಮುಲು ಅವರಂತ ದೊಡ್ಡ ನಾಯಕನನ್ನು ಸೋಲಿಸಿರುವೆ. ಇವರನ್ನು ಸೋಲಿಸಿ ಬಂದ್ರೆ ಉನ್ನತ ಸ್ಥಾನ ಕೊಡುವುದಾಗಿ ದೆಹಲಿಯ ನಾಯಕರು ಹೇಳಿದ್ದರು ಎಂದಿದ್ದಾರೆ.

ನನ್ನ ವಿರುದ್ಧ ಗೆಲ್ಲಲು ಶ್ರೀರಾಮುಲು ನೂರು ಕೋಟಿ ಖರ್ಚು ಮಾಡಿದ್ದರು. ಜನರು ಹಣದ ಆಮೀಷಕ್ಕೆ ಒಳಗಾಗದೇ ನನ್ನ ಕೈ ಹಿಡಿದಿದ್ದಾರೆ. ಹಣದ ಮೂಲಕ ನಮ್ಮ ಕಾರ್ಯಕರ್ತರು ನಾಯಕರನ್ನು ಖರೀದಿ ಮಾಡಲು ಹೋದರು. ಆದ್ರೆ, ಯಾರು ಕೂಡ ಹಣ‌ ಮುಟ್ಟಲಿಲ್ಲ. ತೆಗೆದುಕೊಂಡವರು ಕೂಡ ವಾಪಸ್ ಕೊಟ್ಟರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಈಗ ‘ಬಿಜೆಪಿ ಮುಕ್ತ ದಕ್ಷಿಣ ಭಾರತ’ ನಿರ್ಮಾಣವಾಗಿದೆ : ಮಲ್ಲಿಕಾರ್ಜುನ ಖರ್ಗೆ

ಶ್ರೀರಾಮುಲು ಸೋಲು ನೋವು ತಂದಿದೆ

ವೈಯಕ್ತಿಕವಾಗಿ ಶ್ರೀರಾಮುಲು ಅವರ ಸೋಲು ನೋವು ತಂದಿದೆ. ನನ್ನ ಗೆಲುವಿಗಾಗಿ ಹೋರಾಟ ಮಾಡಿದ್ದೇನೆ. ಆದರೆ, ಶ್ರೀರಾಮುಲು ಕ್ಷೇತ್ರ ಆಯ್ಕೆ ವಿಚಾರದಲ್ಲಿ ಎಡವಿದ್ದರು. ಖಂಡಿತವಾಗಿ ಈ ಬಾರಿ ನಾನು ಸಚಿವ‌ನಾಗುತ್ತೇನೆ. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ. ದೊಡ್ಡ ಅವಕಾಶ ಕೊಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ನಾಗೇಂದ್ರ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿ ಹೋಗಿ ಪ್ರಚಾರ ಮಾಡಿದ್ರು ಗೆಲ್ತಾರೆ. ರಾಹುಲ್ ಕಾಲ್ಗುಣ ಚೆನ್ನಾಗಿದೆ. ದೇಶದ ಅವರು ಉನ್ನತ ಸ್ಥಾನ ಅಲಂಕರಿಸುತ್ತಾರೆ ಅಂತ ಹೇಳಿದ್ದಾರೆ ಎಂದಿದ್ದಾರೆ.

Exit mobile version