Site icon PowerTV

ನಟ ಸುದೀಪ್ ಪ್ರಚಾರ ನಡೆಸಿದ್ದ ಕ್ಷೇತ್ರದಲ್ಲಿ ‘ಬಿಜೆಪಿಗೆ ಹೀನಾಯ ಸೋಲು’

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು.

ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಿದ್ದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪಕ್ಷ ಸೋಲುಕಂಡಿದೆ. ಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ಅವರು ಜಯ ಸಾಧಿಸಿದ್ದಾರೆ.

ಸುರಪುರ ಕ್ಷೇತ್ರದಲ್ಲಿ ರಾಜುಗೌಡ, ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ ಸುಧಾಕರ್ ಹಾಗೂ ಬಳ್ಳಾರಿ ಗ್ರಾಮಾಂತರದಲ್ಲಿ  ಸಚಿವ ಬಿ.ಶ್ರೀರಾಮುಲು ಪರ ಪ್ರಚಾರ ಕಿಚ್ಚ ಅಬ್ಬರದ ಪ್ರಚಾರ ಹಾಗೂ ರೋಡ್ ಶೋ ನಡೆಸಿದ್ದರು. ಈ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲುಕಂಡಿದೆ.

ಇನ್ನೂ, ಮೊಳಕಾಲ್ಕೂರು ಕ್ಷೇತ್ರದ ಬಿಜೆಪಿ ತಿಪ್ಪೇಸ್ವಾಮಿ ಪರ ಸುದೀಪ್, ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ ನಾಯಕ್, ಚಾಮರಾಜನಗರದಲ್ಲಿ ಸಚಿವ ವಿ. ಸೋಮಣ್ಣ ಹಾಗೂ ಕೆಜಿಎಫ್‌ನಲ್ಲಿ ಅಶ್ವಿನಿ ಪರ ಪ್ರಚಾರ ನಡೆಸಿದ್ದರು.

ವರುಣಾದಲ್ಲಿ ಸಿದ್ದರಾಮಯ್ಯಗೆ ಜಯ

ರಾಜ್ಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಸಿದ್ದರಾಮಯ್ಯ ಜಯ ಸಾಧಿಸಿದ್ದಾರೆ. ಸಚಿವ ವಿ. ಸೋಮಣ್ಣ ಅವರಿಗೆ ಇಲ್ಲಿ ಭಾರಿ ಮುಖಭಂಗವಾಗಿದೆ. ಇದಲ್ಲದೆ, ಸಚಿವ ವಿ. ಸೋಮಣ್ಣ ಅವರು ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.

ಸುದೀಪ್ ಪ್ರಚಾರ ಮಾಡಿ ಗೆದ್ದ ಅಭ್ಯರ್ಥಿಗಳು

ಶಿಗ್ಗಾವಿ-ಬಸವರಾಜ ಬೊಮ್ಮಾಯಿ

ದೊಡ್ಡಬಳ್ಳಾಪುರ-ಧೀರಜ್

ಶಿಕಾರಿಪುರ-ವಿಜಯೇಂದ್ರ

ಲಿಂಗಸುಗೂರು-ಮಾನಪ್ಪ ವಜ್ಜಲ್

ರಾಜರಾಜೇಶ್ವರಿ ನಗರ-ಮುನಿರತ್ನ

ರಾಯಚೂರು-ಶಿವರಾಜ್ ಪಾಟೀಲ್

ಕುಷ್ಟಗಿ-ಜಿಎಚ್ ಪಾಟೀಲ್

ಹುಬಳ್ಳಿ-ಧಾರಾವಾಡ ಸೆಂಟ್ರಲ್-ಮಹೇಶ್ ಟೆಂಗಿನಕಾಯಿ

ಜಮಖಂಡಿ-ಜಗದೀಶ್ ಗೆಲುವು

Exit mobile version