Site icon PowerTV

‘ಅಬ್ ಕಿ ಬಾರ್ ಡಿಕೆ’ ಸರ್ಕಾರ್ : ಬೆಂಬಲಿಗರ ಘೋಷಣೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಸುಮಾರು 132 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡು, ಗೆಲುವಿನ ನಾಗಾಲೋಟ್ ಮುಂದುವರಿಸಿದ್ದಾರೆ.

ಮತ್ತೊಂದೆಡೆ, ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ‘ಅಬ್ ಕಿ ಬಾರ್ ಡಿಕೆ ಸರ್ಕಾರ್’ ಎಂದು ಘೋಷಣೆ ಕೂಗುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಸಿಎಂ ಆಗಬೇಕೆಂದು ಅವರ ನಿವಾಸದಲ್ಲಿ ಬೆಂಬಲಿಗರು ಜೈಕಾರ ಹಾಕ್ತಿದ್ದಾರೆ.

ಶೆಟ್ಟರ್ ಗೆ ಸೋಲು

ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಅವರಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರು ಜಗದೀಶ್​ ಶೇಟ್ಟರ್​ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

ಇದೇ ಬಿಜೆಪಿ ಸೋಲಿಗೆ ಕಾರಣ

ಕಾಂಗ್ರೆಸ್ ಪಕ್ಷದ ಗೆಲುವಿಗೆ ಬಿಜೆಪಿಯ ಭ್ರಷ್ಟ ಆಡಳಿತವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ. ಇವುಗಳೆಲ್ಲದರ ಪರಿಣಾಮವೇ ಈಗ ಬಂದಿರುವ ಜನಾದೇಶ ಎಂದು ಕೆಲವು ಅಂಶಗಳನ್ನು ಪಟ್ಟಿ ಮಾಡಿದೆ.

◆54 ಸಾವಿರ PSI ಅಭ್ಯರ್ಥಿಗಳ ನೋವು.

◆ಕೋವಿಡ್‌ನಲ್ಲಿ ಚಿಕಿತ್ಸೆ, ಆಕ್ಸಿಜನ್ ಸಿಗದೆ ಸಾವಿರಾರು ಜನರ ಸಾವು.

◆ಬೆಲೆ ಏರಿಕೆಯಿಂದ ಜನಸಾಮಾನ್ಯರ ಗೋಳು.

◆ಕಮಿಷನ್ ಕಾಟದಿಂದ ನೊಂದವರ ನೋವು.

Exit mobile version