Site icon PowerTV

ಜೆಡಿಎಸ್ ಜೊತೆ ಹೋಗುವ ಚರ್ಚೆ ಮಾಡಿಲ್ಲ : ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು : ನಮಗೆ ಬಹುಮತ ಬಂದೇ ಬರುತ್ತೆ ಎಂಬ ವಿಶ್ವಾಸ ಇದೆ.  ಜೆಡಿಎಸ್ ಜೊತೆ ಹೋಗುವ ಚರ್ಚೆ ಮಾಡಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಹಲವು ರಾಷ್ಟ್ರೀಯ ಸುದ್ದಿ ವಾಹಿನಿಗಳು ಮತಗಟ್ಟೆ ಸಮೀಕ್ಷೆ ಮಾಡಿವೆ. 2018ರಲ್ಲೂ ಸಮೀಕ್ಷೆ ಆಗಿತ್ತು. ಅದಕ್ಕೂ, ಇದಕ್ಕೂ ವ್ಯತ್ಯಾಸ ಇದೆ ಎಂದು ತಿಳಿಸಿದ್ದಾರೆ.

ಈಗ ಬಿಜೆಪಿ ಬೂತ್ ಮಟ್ಟದಲ್ಲಿ, ವಿಧಾನಸಭೆ ಮಟ್ಟದಲ್ಲಿ ತೆಗೆದುಕೊಂಡ ಫೀಡ್​ಬ್ಯಾಕ್ ಪ್ರಕಾರ108 ಸೀಟ್ ಗೆದ್ದೇ ಗೆಲ್ಲುತ್ತೇವೆ. 35 ಕ್ಷೇತ್ರದಲ್ಲಿ 50:50 ಇದೆ. ಅದರಲ್ಲಿ 10 ಸೀಟ್ ಗೆಲ್ಲುತ್ತೇವೆ‌. ಅತಂತ್ರ ಫಲಿತಾಂಶ ಬರುವ ಸೂಚನೆ ಇಲ್ಲ. ಪೂರ್ಣ ಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಕುಮಾರಸ್ವಾಮಿ ಹೇಳೋದ್ರಲ್ಲಿ ತಪ್ಪೇನಿಲ್ಲ : ‘ಮೈತ್ರಿ ಸುಳಿವು’ ಕೊಟ್ಟ ಯಡಿಯೂರಪ್ಪ

ಇಂಡಿಯಾ ಟುಡೇ ಕಳೆದ ಬಾರಿಯೂ ಇದೇ ರೀತಿ ಸರ್ವೆ ಕೊಟ್ಟಿದ್ರು. ಅವರು ತೋರಿಸಲಿ ಎಲ್ಲಿ ಎಷ್ಟು ಬರತ್ತೆ ಅಂತ. ಆದರೆ, ನಾವು ಬೂತ್ ಮಟ್ಟದಲ್ಲಿ ಸರ್ವೆ ಮಾಡಿ ಹೇಳ್ತಿದ್ದೇವೆ. ಸದ್ಯ ಎರಡು ದಿನಗಳಿಂದ ಬೂತ್ ಮಟ್ಟದಲ್ಲಿ ಸಂಗ್ರಹಿಸಿದ ಮಾಹಿತಿ ಅನ್ವಯ ಚರ್ಚೆ ಆಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ನಾವು ಜೆಡಿಎಸ್ ಜೊತೆ ಹೋಗುವ ಚರ್ಚೆ ಮಾಡಿಲ್ಲ. ಆ ರೀತಿ ಅನ್ ಅಸೆಂಬ್ಲಿ ಆದ್ರೆ ಮುಂದೆ ಚರ್ಚೆ ಮಾಡುತ್ತೇವೆ . ವರಿಷ್ಠರ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುಂಚೆ ಬಿಎಸ್ ವೈ ಮನೆಯಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ಹಿರಿಯ ನಾಯಕರ ಚರ್ಚೆ ನಡೆಯಿತು. ಸಿಎಂ ಬೊಮ್ಮಯಿ, ಯಡಿಯೂರಪ್ಪ, ಬೈರತಿ ಬಸವರಾಜ್ ಹಾಗೂ ನಿರಾಣಿ ಮಾತುಕತೆ ನಡೆಸಿದರು.

Exit mobile version