Site icon PowerTV

ಮಾವಿನ ಹಣ್ಣು ತಿಂದರೆ, ಎಷ್ಟೆಲ್ಲಾ ಲಾಭಗಳಿವೆ ನೋಡಿ..

ಬೆಂಗಳೂರು : ಮಾವಿನ ಹಣ್ಣು ಯಾರಿಗೆ ಬೇಡ.? ಹೇಳಿ ರುಚಿಯಲ್ಲಿ ಅತ್ಯಂತ ಹೆಚ್ಚು ರುಚಿ ಉಣಬಡಿಸುವ ಹಣ್ಣು ಸಹ ಹೌದು. ಕಿರಿಯರಿಂದ  ಹಿಡಿದು ಹಿರಿಯರವರೆಗೂ ಅಚ್ಚುಮೆಚ್ಚು ಈ ಮಾವು. 

ಬೇಸಿಗೆಕಾಲ ಬಂತೆಂದರೆ ಮಾವಿನ ಹಬ್ಬವೆಂದೇ  ಹೇಳಬಹುದು. ಮಾವಿನ  ಹಣ್ಣಿನಲ್ಲಿ  ಆರೋಗ್ಯಕ್ಕೆ  ಸಹಾಯಕವಾಗುವ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಮತ್ತು  ಕ್ಯಾಲ್ಸಿಯಂ ಇರುತ್ತದೆ. ವಿಟಮಿನ್ ಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದುಪ್ಪಟ್ಟು ಮಾಡಲು ಸಹಾಯಕವಾಗುತ್ತೆ. ಇದರ ಜೊತೆಗೆ  ಈ ಹಣ್ಣು ರೋಗ ನಿರೋಧಕವಾಗಿಯೂ ಕೆಲಸ ನಿರ್ವಹಿಸುತ್ತದೆ.

ಇವು ಮಾವಿನಲ್ಲಿರುವ ಪೋಷಕಾಂಶಗಳು

100 ಗ್ರಾಂ ಮಾವಿನ ಹಣ್ಣು ಸೇವಿಸುವುದರಿಂದ ದೇಹಕ್ಕೆ ಹಲವು ಪೋಷಕಾಂಶಗಳ ಲಭಿಸುತ್ತವೆ. 81 .0 ಗ್ರಾಂ ತೇವಾಂಶ, 0.6 ಗ್ರಾಂ ಸಸಾರಜನಕ, 0.4 ಗ್ರಾಂ ಕೊಬ್ಬು, 16 ಮಿ.ಗ್ರಾಂ ರಂಜಕ,14 ಮಿ.ಗ್ರಾಂ ಕಬ್ಬಿಣ, 27 ಮಿ.ಗ್ರಾಂ ಮೆಗ್ನೆಶಿಯಂ, 2743 ಐಯು ಎ ಜೀವಸತ್ವ, 0.08 ಮಿ.ಗ್ರಾಂ ಥಯಮಿನ್, 0.09 ಮಿ.ಗ್ರಾಂ ರೈಬೋಫ್ಳವಿನ್, 0.9 ಮಿ.ಗ್ರಾಂ, ನಯಾಸಿನ್, 16 ಮಿ.ಗ್ರಾಂ ಸಿ ಜೀವಸತ್ವ ಮಾವಿನ ಹಣ್ಣಿನ ಸೇವನೆಯಿಂದ ಪಡೆಯಬುದಾಗಿದೆ.

ಸಾಮಾನ್ಯವಾಗಿ ಈ ಹಣ್ಣನ್ನು ಊಟದ ನಂತರ ಸೇವನೆ ಮಾಡುತ್ತಾರೆ. ಮಾವು  ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.  ವಿಟಮಿನ್ ಎ ಇರುವುದರಿಂದ ಕಣ್ಣಿನ ರಕ್ಷಣೆಗೂ ಸಹಾಯಕವಾಗುತ್ತದೆ. ಮಾನಿವ ಹಣ್ಣು ತಿನ್ನುವುದರಿಂದ ಹಸಿವನ್ನು ಸಹ ನಿಯಂತ್ರಿಸುತ್ತದೆ.  ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಫೈಬರ್ ಇರುವ ಆಹಾರ ಉತ್ತಮ. ಮಾವಿನಹಣ್ಣಿನಲ್ಲಿ ಅತೀ ಹೆಚ್ಚು ಪೈಬರ್ ಅಂಶ ಇರುತ್ತದೆ.

 

Exit mobile version