Site icon PowerTV

ಬಂಪರ್ ಆಫರ್ : ಪಕ್ಕಾ ಫಲಿತಾಂಶ ಹೇಳಿದರೆ 10 ಲಕ್ಷ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಮತ ಎಣಿಕೆ ಕೇಂದ್ರಗಳತ್ತ ಎಲ್ಲರ ಚಿತ್ತ ನೆಟ್ಟಿದೆ.

ನಾಳಿನ ಪ್ರಕಟಗೊಳ್ಳಲಿರುವ ರಿಸಲ್ಟ್ ನ ಕುತೂಹಲದ ಮಧ್ಯೆಯೇ ಮಂಗಳೂರಿನ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ದೊಡ್ಡ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಯಾವ ಸರ್ಕಾರ ಬರುತ್ತದೆ? ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಎಷ್ಟು ಸೀಟು ಬರುತ್ತದೆ? ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಡೆಯುವ ನಿಖರ ಮತಗಳು ಎಷ್ಟು? ಹೀಗೆ ಒಟ್ಟು 20 ಪ್ರಶ್ನೆ ಮುಂದಿಟ್ಟಿದ್ದಾರೆ.

ಇವುಗಳ ಪೈಕಿ 19 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರಿಗೆ 10 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಆ ಮೂಲಕ ಜ್ಯೋತಿಷಿಗಳಿಗೆ ಬಹುದೊಡ್ಡ ಟಾಸ್ಕ್ ಕೊಟ್ಟಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ‘ಕುಮಾರಣ್ಣನೇ ಕಿಂಗ್ ಮೇಕರ್’ : ಸಿಎಂ ಇಬ್ರಾಹಿಂ ಟಕ್ಕರ್

1 ಕೋಟಿ ಮೌಲ್ಯದ ಆಸ್ತಿ ಬಾಜಿ

ಕೊಪ್ಪಳದಲ್ಲೂ ಚುನಾವಣಾ ಬೆಟ್ಟಿಂಗ್ ಜೋರಾಗಿದೆ. ಕನಕಗಿರಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಬೆಂಬಲಿಗ ಕೋಟಿಗಟ್ಟಲೆ ಬಾಜಿ ಕಟ್ಟಲು ಮುಂದಾಗಿದ್ದಾರೆ. ಕನಕಗಿರಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಗೆಲ್ಲುತ್ತಾರೆಂದು ಶಿವರಾಜ ತಂಗಡಗಿ ಬೆಂಬಲಿಗ ಕಾರಟಗಿಯ ಸತ್ಯ ಪ್ರಕಾಶ ಚೌದ ಬೆಟ್ಟಿಂಗ್​ ಕಟ್ಟಿದ್ದಾರೆ.

ಬೆಟ್ಟಿಂಗ್ ಕಟ್ಟುವವರು ಇಂದು ಸಂಜೆವರೆಗೆ ಸಂಪರ್ಕ ಮಾಡಿ ಎಂದು ಫೇಸ್ಬುಕ್​​ನಲ್ಲಿ ಪೋಸ್ಟ್ ಹಾಕಿದ್ದಾರೆ.  ನಂತರ ಚೆಳ್ಳೂರು ಕ್ಯಾಂಪ್ ಕಾಲುವೆ ಪಕ್ಕದ 1 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬೆಟ್ಟಿಂಗ್​ ಕಟ್ಟಿದ್ದಾರೆ.. ಶಿವರಾಜ ತಂಗಡಗಿ ಗೆದ್ದೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್​ ಕಟ್ಟಿದ್ದಾರೆ.

Exit mobile version