Site icon PowerTV

ಚುನಾವಣೆ ಬಳಿಕ ರಿಲ್ಯಾಕ್ಸ್ ಮೂಡ್‌; ಸಿಂಗಾಪೂರ್ ಗೆ ತೆರಳಿದ ಹೆಚ್ ಡಿ ಕೆ

ಬೆಂಗಳೂರು : ಸತತ ಆರು ತಿಂಗಳಿಂದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಕುಮಾರಸ್ವಾಮಿ ನೆನ್ನೆ  ಚುನಾವಣೆ ಮುಗಿದ  ಮುಗಿದ ಬೆನ್ನಲ್ಲೆ ಎರಡು ದಿನಗಳ ಕಾಲ ವಿಶ್ರಾಂತಿ‌ಗಾಗಿ ಸಿಂಗಾಪುರ್ ಪ್ರಯಾಣ ಮಾಡಿದ್ದಾರೆ.

ಹೌದು, ಹೆಚ್​ ಡಿ ಕುಮಾರಸ್ವಾಮಿ ನಿನ್ನೆ ಮದ್ಯರಾತ್ರಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಿಂಗಾಪುರ್ ಗೆ ತೆರಳಿದ್ದಾರೆ.

ಕಮಾರ ಪರ್ವದ ಮೂಲಕ ರಾಜ್ಯ ಪ್ರವಾಸ ಮಾಡಿದ್ದ ಎಚ್‌ಡಿಕೆ ಅವರು ಪ್ರಚಾರದ ಕೊನೆ ದಿನಗಳಲ್ಲಿ ತೀವ್ರವಾಗಿ ಬಳಲಿದ್ದರು. ಹೃದ್ರೋಗಿಯಾಗಿರುವ ಅವರು ವಿಶೇಷ ಪರೀಕ್ಷೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಮಂಗಳವಾರ ಫ‌ಲಿತಾಂಶ ಪ್ರಕಟವಾಗಲಿದ್ದು, ಸೋಮವಾರ ರಾತ್ರಿ ಇಬ್ಬರೂ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ತಿಳಿದು ಬಂದಿದೆ.

 

Exit mobile version