Site icon PowerTV

ಮೇವು ಸಮಸ್ಯೆ : ಗೋಶಾಲೆ ಸಹಾಯಕ್ಕೆ ‘ಕೈ’ಜೋಡಿಸುವಂತೆ ಸಿದ್ದಲಿಂಗ ಶ್ರೀ ಮನವಿ

ಬೆಂಗಳೂರು : ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಗೋಶಾಲೆಯಲ್ಲಿ ಮೇವು ಸಮಸ್ಯೆ ಉಂಟಾಗಿದ್ದು ಸಹಾಯಕ್ಕೆ ಕೈ ಜೋಡಿಸುವಂತೆ ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.

ಸಿದ್ದಲಿಂಗೇಶ್ವರ ಗದ್ದುಗೆ ಮಠದ ಗೋಶಾಲೆಗೆ ನಿಮ್ಮೆಲ್ಲರ ಸಹಕಾರ ಹಾಗೂ ಸಹಾಯದ ಅವಶ್ಯಕತೆ ಉಂಟಾಗಿದೆ. ಗೋ ಸೇವೆಯನ್ನು ಮಾಡುವುದರಿಂದ ಅನೇಕ ಜನ್ಮದ ಪಾಪ ಕರ್ಮಗಳೆಲ್ಲವೂ ನಿವಾರಣೆಯಾಗುತ್ತವೆ ಎಂದು ಶ್ರೀಗಳು ಹೇಳಿದ್ದಾರೆ.

ಇದನ್ನೂ ಓದಿ : ‘ಬಗಳಾಮುಖಿಯ ಆರಾಧನೆ’ ಯಾಕೆ ಮಾಡಬೇಕು? ಯಾವ ರೀತಿ ಆರಾಧಿಸಬೇಕು?

ನಿಮ್ಮ ಸೇವೆಯಿಂದ ಮಹಾಲಕ್ಷ್ಮಿಯು ನಿಮಗೆ ಅನುಗ್ರಹವನ್ನು ಉಂಟುಮಾಡುತ್ತಾಳೆ. ಇಂತಹ ಗೋವನ್ನು ಶಾಸ್ತ್ರೋಕ್ತವಾಗಿ ಸೇವೆಯನ್ನು ಮಾಡುವುದರಿಂದ ನಮಗೆ ಅಷ್ಟೈಶ್ವರ್ಯಗಳೇ ಪ್ರಾಪ್ತಿಯಾಗುತ್ತವೆ ಎಂದು  ಗೋ ಸೇವೆಯ ಮಹತ್ವದ ಬಗ್ಗೆ ತಿಳಿಸಿದ್ದಾರೆ.

ನಮ್ಮ ಗೋಶಾಲೆಯ ಹಸುಗಳಿಗೆ ಬೇಕಾದ ಮೇವಿನ ಅವಶ್ಯಕತೆ ಉಂಟಾಗಿದೆ. ಆದ್ದರಿಂದ ಹಸುಗಳಿಗೆ ಬೇಕಾದ ಹುಲ್ಲು, ಕಾಳುಗಳು, ಶೇಂಗಾ ಹಿಂಡಿ, ಕೊಬ್ಬರಿ ಹಿಂಡಿ, ಬೂಸಾ, ತೌಡು, ಹತ್ತಿಕಾಳುಗಳು,ಭತ್ತದ ತೌಡು, ಪೇಣಿ ಹಾಗೂಹಸುಗಳಿಗೆ ಬೇಕಾದನ ಮೇವನ್ನು ದಾನವಾಗಿ ನೀಡಿ ಪುಣ್ಯಕೋಟಿಯ ಸೇವೆಯನ್ನು ಮಾಡಿ ಕೋಟಿ ಪುಣ್ಯವನ್ನು ಗಳಿಸಿ ಎಂದು ಕೋರಿದ್ದಾರೆ.

Exit mobile version