Site icon PowerTV

ವೋಟ್ ಮಾಡಿ ಸೆಲ್ಫಿಗೆ ಪೋಸ್ ನೀಡಿದ ನಟಿಯರು ; ಇಲ್ಲಿವೆ ನೋಡಿ ಫೋಟೋಗಳು

ಬೆಂಗಳೂರು : ಇಂದು ರಾಜ್ಯ ವಿಧಾನಸಭಾ ಚುನಾವಣೆ (ಮೆ 10) ನಡೆಯುತ್ತಿದೆ. ರಾಜ್ಯದ ಜನತೆ ಮತಗಟ್ಟೆ ಬಳಿ ಸರತಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತ ಚಲಾಯಿಸುತ್ತಿದ್ದಾರೆ.

ಹೌದು, ಇಂದು ಸಾಮಾನ್ಯರಂತೆ ಸಿನಿ ಸೆಲೆಬ್ರಿಟಿಗಳು ಸಹ ಮತದಾನ ಮಾಡುತ್ತಿದ್ದಾರೆ. ನಟಿ ಮಣಿಯರು ಸಹ ವೋಟ್ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.

ಕಾಂತರ ಸಿನಿಮಾದ ಬೆಡಗಿ ಸಪ್ತಮಿ ಕೂಡ ತಮ್ಮ ಹಕ್ಕು ಚಲಾಯಿಸಿದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸಪ್ತಮಿ ಅಮೂಲ್ಯ ಮತ ಚಲಾಯಿಸಿ ಫೋಟೋ ಶೇರ್ ಮಾಡಿದ್ದಾರೆ.

ಕನ್ನಡತಿ ಸೀರಿಯಲ್​ ಮೂಲಕ ಮನೆ ಮಗಳಾಗಿರುವ ರಜನಿ ರಾಘವನ್ ತಮ್ಮ ಅಮೂಲ್ಯವಾದ ಮತ ಚಲಾಯಿಸಿ ಮತದಾನ ಮಾಡಿದ್ದಾರೆ.

ನಟಿ ಅಮೂಲ್ಯ ಕೂಡ ತಮ್ಮ ಅಮೂಲ್ಯವಾದ ಮತವನ್ನುಇಂದು ಮುಂಜಾನೆ ಬೆಂಗಳೂರಿನ ಆರ್​ಆರ್​​ ನಗರದಲ್ಲಿ ಅವರು ಮತ ಚಲಾವಣೆ ಮಾಡಿದ್ದಾರೆ.
ಇಂದು ಬೆಳಗ್ಗೆಯೇ ನಟಿ ಮೇಘನಾ ಗಾಂವ್ಕರ್  ಬಂದು ಮತದಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ವೋಟ್ ಮಾಡಿದ ನಟಿ ಮೇಘನಾ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
 ನಟಿ ಮಿಲನ ನಾಗರಾಜ್​ ತಮ್ಮ ಅಮೂಲ್ಯವಾದ ಮತವನ್ನು ಚಲಾವಣೆ ಮಾಡಿ ಸೆಲ್ಫಿಗೆ ಪೋಸ್​ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಸಂಯುಕ್ತ ಹೊರನಾಡು ಹಾಗೂ ತಾಯಿ ಸುಧಾ ಬೆಳವಾಡಿ ಇಬ್ಬರೂ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇಬ್ಬರೂ ವೋಟ್ ಮಾಡಿದ ಬಳಿಕ ಸೆಲ್ಫಿಗೆ ಪೋಸ್ ನೀಡಿದ್ದಾರೆ.
Exit mobile version