Site icon PowerTV

ಧೋನಿ ಪಡೆಗೆ ಡೆಲ್ಲಿ ಚಾಲೆಂಜ್ : ಇಂದಿನ ಪಂದ್ಯ ಗೆದ್ರೆ ಚೆನ್ನೈ ಪ್ಲೇ ಆಫ್ ಫಿಕ್ಸ್

ಬೆಂಗಳೂರು : ಐಪಿಎಲ್ ನಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈ ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ ಹಾದಿ ಕನ್ಫರ್ಮ್ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ.

ಚೆನ್ನೈ ತಂಡ ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 6 ಗೆಲುವು, 4 ಸೋಲು ಕಂಡು 13 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಆಡಿರುವ 10 ಪಂದ್ಯಗಳಲ್ಲಿ 4 ಜಯ, 6 ಪಂದ್ಯಗಳಲ್ಲಿ ಸೋಲು ಕಂಡು 8 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ : ತಲಾ ಧೋನಿ ಹೊಸ ಮೈಲುಗಲ್ಲು : ಈ ಸಾಧನೆ ಮಾಡಿದ ಮೊದಲ ನಾಯಕ ಇವರೇ!

ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ಯಶ್ ಧುಲ್, ರಿಲೀ ರೊಸೊವ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಅಮನ್ ಹಕೀಮ್ ಖಾನ್ ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಇಶಾಂತ್ ಶರ್ಮಾ

Exit mobile version