Site icon PowerTV

ಎಕ್ಸಿಟ್ ಪೊಲ್ಸ್ ಏನೇ ಹೇಳಿದರೂ ‘ನಾವೇ ಕಿಂಗ್’ ಆಗುತ್ತೇವೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಈ ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಪೂರ್ಣ ಬಹುಮತ ಪಡೆದು, ಸರ್ಕಾರ ರಚಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ಎಕ್ಸಿಟ್ ಪೊಲ್ಸ್ ರಿಸಲ್ಟ್ 100ಕ್ಕೆ 100% ಕರೆಕ್ಟ್ ಆಗಿರುವುದಿಲ್ಲ. ನಿಜವಾದ ಫಲಿತಾಶ ಬರುವಾಗ ಪ್ಲಸ್ ಮೈನಸ್ ಆಗುತ್ತದೆ ಎಂದು ಹೇಳಿದ್ದಾರೆ.

ಎಕ್ಸಿಟ್ ಪೊಲ್ಸ್ ಫಲಿತಾಂಶದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಬಹುಮತ ಸಿಗುತ್ತದೆ. ಹಾಗಾಗಿ ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆ ಇಲ್ಲ. ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದೇ ಮೇ 13ರ ಫಲಿತಾಂಶ ಬರುವ ತನಕ ಕಾದು ನೋಡಿ. ನಾವೇ ಕಿಂಗ್ ಆಗುತ್ತೇವೆ. ಜೆಡಿಎಸ್​ ಪಕ್ಷ ಕಿಂಗ್ ಮೇಕರ್ ಆಗುವುದಿಲ್ಲ. ಬಿಜೆಪಿಗೆ ಸಂಪುರ್ಣ ಬಹುಮತ ಸಿಗುವ ವಿಶ್ವಾಸ ಇದೆ. ರೆಸಾರ್ಟ್ ರಾಜಕಾರಣಕ್ಕೆ ಅವಕಾಶ ಸಿಗಲ್ಲ ಎಂದ್ದಾರೆ. ಆ ಮೂಲಕ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಮುನ್ಸೂಚನೆ ನೀಡಿರುವ ಸಮೀಕ್ಷೆಯನ್ನು ತಳ್ಳಿಹಾಕಿದ್ದಾರೆ.

ಕಾರ್ಯಕರ್ತರಿಗೆ ಸಿಎಂ ಧನ್ಯವಾದ

ಸಿಎಂ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕನೇ ಬಾರಿ ಆಯ್ಕೆ ಮಾಡಲು ಶ್ರಮಿಸಿದವರಿಗೆ ಚಿರಋಣಿ ಎಂದಿದ್ದಾರೆ. ಅಲ್ಲದೇ, ಬಿಜೆಪಿ ಕಾರ್ಯಕರ್ತರ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ.

Exit mobile version