Site icon PowerTV

ರಾಜ್ಯದ ‘ಭವ್ಯ ಭವಿಷ್ಯಕ್ಕಾಗಿ ಮತದಾನ’ ಮಾಡಿ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಭವ್ಯ ಭವಿಷ್ಯಕ್ಕಾಗಿ ಮತದಾನ ಅತೀ ಮುಖ್ಯವಾದದ್ದು. ಎಲ್ಲರೂ ಮನೆಯಿಂದ ಹೊರಬಂದು ತಪ್ಪದೇ ಮತ ಚಲಾಯಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಸರ್ಕಾರಿ ಶಾಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಿಎಂ ಬೊಮ್ಮಾಯಿ ಅವರು ಮತ ಚಲಾಯಿಸಿದರು. ಮತದಾನ ಮಾಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ಕ್ಷೇಯೋಭಿವೃದ್ಧಿಗೆ ಜನರ ಮತ ಇರುತ್ತದೆ. ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ನನಗೆ ಇದೆ. ಶಾಸಕನಾಗಿ, ಮುಖ್ಯಮಂತ್ರಿಯಾಗಿ ಮತದಾನ ಮಾಡುವುದರಲ್ಲಿ ವ್ಯತ್ಯಾಸ ಏನಿಲ್ಲ. ಕರ್ನಾಟಕದ ನಾಗರಿಕನಾಗಿ ನಾ‌ನು ಮತದಾನ ಮಾಡಿದ್ದೇನೆ ಎಂದುತಿಳಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್ ಮತದಾನ

ಎಲ್ಲರೂ ಮತದಾನ ಮಾಡಬೇಕು, ನಾನು ಮತದಾನ ಮಾಡಿದ್ದೇನೆ. ತಾವು ಹೊರಗಡೆ ಬನ್ನಿ ಹಕ್ಕನ್ನು ಚಲಾಯಿಸಿ. ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು. ಈ ಚುನಾವಣೆ ಒಂದು ಕಡೆ ಅಭಿವೃದ್ಧಿ, ಮತ್ತೊಂದು ಕಡೆ ಸುಳ್ಳಿನ‌ ಚುನಾವಣೆ. ಕಳೆದ ಬಾರಿ ಅಪವಿತ್ರ ಮೈತ್ರಿ ಮಾಡಿಕೊಂಡು‌ ಸರ್ಕಾರ ನಡೆಸಲು‌ ಆಗದಿದ್ದಾಗ ನಮಗೆ ಕೊಟ್ಟರು ಎಂದು ಹೇಳಿದ್ದಾರೆ.

ನಾಡಿನ ಉದ್ದಗಲಕ್ಕೂ ನಾನು ಸಂಚರಿಸಿದ್ದು, ಈ ಬಾರಿ ಜನತೆಯ ಒಲವು ಬಿಜೆಪಿ ಪಕ್ಷದ ಪರವಿದ್ದು, ಜನತೆ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರಕ್ಕೆ ಆಶೀರ್ವದಿಸುತ್ತಾರೆಂಬ ಸಂಪೂರ್ಣ ವಿಶ್ವಾಸ ನನ್ನದಾಗಿದೆ ಎಂದು ತಿಳಿಸಿದ್ದಾರೆ.

Exit mobile version