Site icon PowerTV

ಕ್ಯೂನಲ್ಲಿ ನಿಂತು ಸಿ.ಎಂ ಬೊಮ್ಮಾಯಿ ಮತದಾನ

ಶಿಗ್ಗಾವಿ : ಇಡೀ ರಾಜ್ಯವೇ ಎದುರು ನೋಡುತ್ತಿರುವ ರಾಜಕಾರಣದ ಕೇಂದ್ರ ಬಿಂದುವಾಗಿರುವ ಚುನಾವಣೆಗೆ  ಮತದಾನ ಶುರುವಾಗಿದೆ. ಮತದಾನ ಮಾಡಲು ಬೆಳಗ್ಗೆಯಿಂದಲೇ ಅನೇಕ ಗಣ್ಯರು, ಹಿರಿಯನಾಗರೀಕರು, ಸ್ಯಾಂಡಲ್​ವುಡ್​ ನಟರು, ಎಲ್ಲರೂ ಮತಗಟ್ಟೆಗೆ ಹೋಗಿ ಮತದಾನ ಮಾಡುತ್ತಿದ್ದಾರೆ.

ಹೌದು, ಇಂದು ಶಿಗ್ಗಾವಿಯಲ್ಲಿ ಸಿ.ಎಂ ಬೊಮ್ಮಾಯಿ ಮತ್ತು ಅವರ ಪುತ್ರ ಭರತ್‌ ಜೊತೆ ಮತಗಟ್ಟೆಗೆ ಹೋಗಿ ಮತದಾನ ಮಾಡಿದ್ದಾರೆ.

ಮತದಾನ ಎಲ್ಲಾರ ಹಕ್ಕು ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

ಇನ್ನೂ ನಾಡಿನ ಉದ್ದಗಲಕ್ಕೂ ನಾನು ಸಂಚರಿಸಿದ್ದು, ಈ ಬಾರಿ ಜನತೆಯ ಒಲವು ಭಾರತೀಯ ಜನತಾ ಪಕ್ಷದ ಪರವಿದ್ದು, ಜನತೆ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರಕ್ಕೆ ಆಶೀರ್ವದಿಸುತ್ತಾರೆಂಬ ಸಂಪೂರ್ಣ ವಿಶ್ವಾಸ ನನ್ನದಾಗಿದೆ.

ಇಂದು ನನ್ನ ತವರು ಶಿಗ್ಗಾಂವಿಯ ಸರ್ಕಾರಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ, ನನ್ನ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದೆನು. ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಎಂದು ಟ್ವೀಟ್​ ಮಾಡಿದ್ದಾರೆ.

Exit mobile version