Site icon PowerTV

ಮೆಸ್ಸಿ ಮುಡಿಗೆ ‘ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ’

ಬೆಂಗಳೂರು : ಅರ್ಜೆಂಟೀನಾದ ಫುಟ್ ಬಾಲ್ ಸ್ಟಾರ್ ಹಾಗೂ ಫುಟ್‌ ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಮುಡಿಗೆ ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಲಭಿಸಿದೆ.

ಹೌದು, ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿ ಗೆದ್ದ ಮೊತ್ತ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಲಯೊನೆಲ್ ಮೆಸ್ಸಿ ಪಾತ್ರರಾಗಿದ್ದಾರೆ.

ಫುಟ್‌ಬಾಲ್ ವಿಶ್ವಕಪ್ ವಿಜೇತ ನಾಯಕ ಮೆಸ್ಸಿ, ಅರ್ಜೆಂಟೀನಾದ ಪರವಾಗಿ ಲಾರೆಸ್ ವರ್ಷದ ವಿಶ್ವ ತಂಡ ಪ್ರಶಸ್ತಿಯನ್ನು ಸ್ವೀಕರಿಸಿದರು. ಮೆಸ್ಸಿ ಅವರು ಎರಡನೇ ಬಾರಿಗೆ ಲಾರೆಸ್ ವರ್ಷದ ಕ್ರೀಡಾಪಟು ಗೆದ್ದು ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ : ಜಡೇಜಾ ಹೊಸ ದಾಖಲೆ : ಈ ಸಾಧನೆ ಮಾಡಿದ 8ನೇ ಕ್ರಿಕೆಟಿಗ ಜಡ್ಡು

ಈ ಹಿಂದೆ 2020ರಲ್ಲಿ ದಿಗ್ಗಜ ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಜೊತೆ ಪ್ರತಿಷ್ಠಿತ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

ಈ ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ ಮೆಸ್ಸಿ, ನನಗಿಂತ ಮೊದಲು ವರ್ಷದ ಲಾರೆಸ್ ಸ್ಪೋರ್ಟ್ಸ್‌ ಮ್ಯಾನ್ ಪ್ರಶಸ್ತಿಯನ್ನು ಗೆದ್ದ ಅದ್ಭುತ ದಂತಕಥೆಗಳ ಹೆಸರನ್ನು ನಾನು ನೋಡುತ್ತಿದ್ದೆ. ಆದರೆ, ಇದೀಗ ಫೆಡರರ್, ನಡಾಲ್, ಶುಮಾಕರ್, ಜೊಕೊವಿಕ್, ಬೋಲ್ಟ್ ಸೇರಿದಂತೆ ದಿಗ್ಗಜರ ಸಾಲಿನಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

Exit mobile version