Site icon PowerTV

ಹಣ ಹಂಚೋಕೆ ಮುನ್ನ ಎಚ್ಚರ..! 2,896 FIR ದಾಖಲು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಒಂದೇ ದಿನ ಬಾಕಿ! ಹೀಗಾಗಿ, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ನಾಯಕರು ಹಾಗೂ ಬೆಂಬಲಿಗರು ಹಣ ಹಂಚೋಕೆ ಹೊಂಚು ಹಾಕಿದ್ದಾರೆ. ಅಂಥವರಿಗೆ ಖಾಕಿ ಪಡೆ ಖಡಕ್ ಎಚ್ಚರಿಕೆ ರವಾನಿಸಿದೆ.

ಹೌದು, ರಾಜ್ಯಾದ್ಯಂತ 2,896 ಎಫ್ಐಆರ್ (FIR) ದಾಖಲಾಗಿದೆ. ಇದುವರೆಗೂ 230 ಕೋಟಿ ಜಫ್ತಿ ಮಾಡಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ADGP ಅಲೋಕ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ನಿರ್ದೇಶನದಂತೆ ಬಂದೋಬಸ್ತ್ ಮಾಡಲಾಗಿದ್ದು, ಶಿವಮೊಗ್ಗ, ಮಂಗಳೂರು, ಬೆಳಗಾವಿ ಸೇರಿ ಹಲವು ಕಡೆ ಹಣ ಸೀಜ್ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ 15 ಸಾವಿರ ಖಾಕಿ ಕಣ್ಗಾವಲು!

ಇನ್ನು 1.56 ಲಕ್ಷ ಪೊಲೀಸ್​ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಭದ್ರತೆಗೆ ಬಂದಿದ್ದಾರೆ. ಬಾರ್ಡರ್​​ಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಇವತ್ತು ನಾಳೆ ಚೆಕ್ ಪೋಸ್ಟ್​ಗಳಲ್ಲಿ ಭಾರೀ ಭದ್ರತೆ ಇರುತ್ತದೆ ಎಂದು ಹೇಳಿದ್ದಾರೆ.

ಇಂದು ರಾತ್ರಿ ಎಲ್ಲಾ ಕಡೆ ಹದ್ದಿನ ಕಣ್ಣು ಇಡಲಾಗಿರುತ್ತೆ. ಹಣ ಹಂಚೋಕೂ ಯಾರಿಗೂ ಬಿಡೋದಿಲ್ಲ. ಹೀಗಾಗಿಯೇ ರಾತ್ರಿ ವೇಳೆ ಎಲ್ಲಾ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

Exit mobile version