Site icon PowerTV

ಪ್ರವಾಸಿಗರೇ ಎಚ್ಚರ… ವೋಟ್ ಮಾಡದವರಿಗೆ ನೋ ಎಂಟ್ರಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ  ಒಂದು ರಾತ್ರಿಯಷ್ಟೇ ಬಾಕಿ ಇದೆ. ನಾಳೆ (ಮೇ 10) ಬೆಳಗ್ಗೆ 7ರಿಂದ ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೀಗಾಗಿ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ.

ಹೌದು,ಮತ ಚಲಾಯಿಸಲು ಮತದಾನ ದಿನ ರಜೆ ನೀಡದ್ದು, ಜನ ವೋಟ್​ ಮಾಡಲು ಹೋಗದೆ ಟ್ರಿಪ್​ಗೆ ಹೋಗುವ ಸಾದ್ಯತೆ ಇದ್ದು, ಇದಕ್ಕೆ ಅವಕಾಶ ನೀಡದೇ ಮತದಾನ ಮಾಡಲು ಪ್ರೇರೇಪಿಸಲು ಹಲವು ಪ್ರವಾಸಿತಾಣಗಳಿಗೆ ನಿರ್ಬಧ ಹೇರಲಾಗಿದೆ.

ಶಿವಮೊಗ್ಗದಲ್ಲೂ ಪ್ರವಾಸಿ ತಾಣಗಳಿಗೆ ನಿರ್ಬಂಧ 

ಮತದಾನ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಫಾಲ್ಸ್​,ಕುಪ್ಪಳಿ,ಕವಿಶೈಲ, ಕವಿಮನೆ ಹಾಗೂ ಕೊಪ್ಪ ತಾಲೂಕು ಹಿರೇಕೂಡಿಗೆಯ ಕುವೆಂಪು ಜನ್ಮಸ್ಥಳದ ಸ್ಮಾರಕ, ತ್ಯಾವರೆಕೊಪ್ಪ ಸಿಂಹಧಾಮಕ್ಕೂ ಸಿಗಂದೂರು ಕ್ಷೇತ್ರಕ್ಕೆ ಮೇ 10ರಂದು ಬಂದ್‌  ಮಾಡಲಾಗಿದೆ.

ಇನ್ನೂ ಹಂಪಿ, ಮೈಸೂರು,ಬಾದಮಿ, ಚಿಕ್ಕಮಗಳೂರು ಇನ್ನೂ ಕೆಲವು ಪ್ರವಾಸಿತಾಣಗಳ ವೀಕ್ಷಣಿಗೆ  ನೋ ಎಂಟ್ರಿ ನೀಡಿದೆ.

 

 

Exit mobile version