Site icon PowerTV

ಗ್ಯಾಸ್ ಸಿಲಿಂಡರ್ ಪೂಜೆ ನೋಡಿದ್ದೀರಾ? : ಡಿಕೆಶಿ ಹೀಗೆ ಮಾಡಿದ್ದೇಕೆ?

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗ್ಯಾಸ್ ಸಿಲಿಂಡರ್ ಗೆ ಪೂಜೆ ಮಾಡಿದ್ದಾರೆ.

ನಾಳೆ (ಮೇ 10) ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಈ ಕಸರತ್ತು ಮಾಡಿದ್ದಾರೆ ಎನ್ನಲಾಗಿದೆ. ಸಿಲಿಂಡರ್ ಗೆ ಹೂವಿನ ಹಾರ ಹಾಕಿ, ಹರಿಶಿಣ ಕುಂಕುಮ ಇಟ್ಟು ಗಂಧದ ಕಡ್ಡಿ ಹಾಗೂ ಕರ್ಪೂರ ಹಚ್ಚಿ ಪೂಜೆ ಮಾಡಿದ್ದಾರೆ.

ಈ ದೇಶದ ಪ್ರಧಾನಮಂತ್ರಿಗಳ ಮಾರ್ಗದರ್ಶನದಂತೆ ನಾನು ಕೂಡ ನನ್ನ ರಾಜ್ಯದ ಕಾರ್ಯಕರ್ತರು ಹಾಗೂ ಜನರಿಗೆ ಸಂದೇಶ ರವಾನಿಸುತ್ತಿದ್ದೇನೆ. ಅಡುಗೆ ಸಿಲಿಂಡರ್ ಗೆ ನಮಸ್ಕರಿಸಿ ಮತದಾನ ಮಾಡಿ ಎಂದು ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಸಿಲಿಂಡರ್ ದರವನ್ನು ನೆನಪಿಸುವ ಕೆಲಸ ಮಾಡಿದ್ದಾರೆ.

ಪ್ರಧಾನಮಂತ್ರಿಗಳ ಕೋವಿಡ್ ಸಮಯದಲ್ಲಿ ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ ಎಂದು ಹೇಳಿದ್ದರು. ಎಲ್ಲರೂ ಅದನ್ನು ಪಾಲಿಸಿದ್ದರು. 2014 ರ ಚುನಾವಣೆ ಸಮಯದಲ್ಲಿ ಮೋದಿ ಅವರು ಮತದಾನ ಮಾಡಲು ಹೋಗುವ ಮುನ್ನ ಅಡುಗೆ ಸಿಲಿಂಡರ್ ಗೆ ನಮಿಸಿ ಮತದಾನ ಮಾಡಿ ಎಂದು ಕರೆ ನೀಡಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚಾಮುಂಡೇಶ್ವರಿ ಸನ್ನಿಧಿಯಲ್ಲಿ ‘ಸಿದ್ದು-ಡಿಕೆಶಿ ಒಗ್ಗಟ್ಟು’ ಪ್ರದರ್ಶನ

ಮೋದಿ ಮಾತಿಗೆ ಬೆಲೆ ಕೊಡುತ್ತೇವೆ

ಹೀಗಾಗಿ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಪ್ರಧಾನಿ ಮಾತಿಗೆ ಬೆಲೆ ಕೊಟ್ಟು ಎಲ್ಲಾ ಬೂತ್ ಗಳ ಬಳಿ ಇರುವ ಪಕ್ಷದ ಕ್ಯಾಂಪ್ ಕೇಂದ್ರಗಳಲ್ಲಿ ಖಾಲಿ ಅಡುಗೆ ಸಿಲಿಂಡರ್ ಇಟ್ಟು ಅದಕ್ಕೆ ನಮಿಸಿ ಮತದಾನ ಮಾಡಿ ಎಂದು ನಮ್ಮ ಕಾರ್ಯಕರ್ತರಿಗೆ ಕರೆ ನೀಡುತ್ತೇನೆ ಎಂದಿದ್ದಾರೆ. ಇದೇ ವೇಳೆ ವೀರಶೈವ ಮಹಾಸಭೆ ಹಾಗೂ ಗುತ್ತಿಗೆದಾರರ ಸಂಘದ ವತಿಯಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿರುವ ಪತ್ರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅದು ಮಹಾಸಭಾದವರ ಇಚ್ಛೆ. ಕಳೆದ ಬಾರಿ ಮಠಾಧೀಶರೂ ಕೆಲವು ತೀರ್ಮಾನ ಕೈಗೊಂಡಿದ್ದರು. ಈ ಬಾರಿ ಮಹಾಸಭಾ ಅವರು ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ. ಗುತ್ತಿಗೆದಾರರ ಸಂಘದ ಪತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹೇಳಿದ್ದಾರಾ? ಸರ್ಕಾರ ನೌಕರರು ಹಳೆ ಪಿಂಚಣಿ ವ್ಯವಸ್ಥೆಗೆ ನಮ್ಮ ಮತ ಎಂದು ಹೇಳುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನ ಬಗ್ಗೆ ಬೆಂಬಲ ನೀಡುತ್ತಾರೆ. ಬಂಜಾರ ಹಾಗೂ ಕೆಲವು ಸಮಾಜ ಆಯಾ ಊರುಗಳಲ್ಲಿ ಒಂದೊಂದು ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ತೀರ್ಮಾನ ಪ್ರಜಾಪ್ರಭುತ್ವದಲ್ಲಿ ಇದನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.

Exit mobile version