Site icon PowerTV

ಹಿರಿಯೂರು ಜೆಡಿಎಸ್ ಅಭ್ಯರ್ಥಿ ಪತ್ನಿ ED ವಶಕ್ಕೆ

ಚಿತ್ರದುರ್ಗ : ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ಪತ್ನಿ ಜಿ.ಪಿ.ಲತಾ ಹಾಗೂ ಅವರ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.  

ಧರ್ಮಪುರ ಹೋಬಳಿಯ ಮುಂಗುಸುವಳ್ಳಿಯ ಮನೆಯ ಮೇಲೆ ಆರು ಅಧಿಕಾರಿಗಳ ತಂಡ ಮಧ್ಯಾಹ್ನ 2ಕ್ಕೆ ದಾಳಿ ನಡೆಸಿತ್ತು. ಈ ವೇಳೆ ರವೀಂದ್ರಪ್ಪ ಹಾಗೂ ಅವರ ಪುತ್ರ ಡಾ.ಸತ್ಯನಾರಾಯಣ ಮತಯಾಚನೆಗೆ ಹೊರ ಹೋಗಿದ್ದರು.

ಇದನ್ನೂ ಓದಿ : ಹಣ ಹಂಚೋಕೆ ಮುನ್ನ ಎಚ್ಚರ..! 2,896 FIR ದಾಖಲು

ಮನೆ ಪರಿಶೀಲಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಲತಾ ಮತ್ತು ಶ್ವೇತಾರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇನ್ನೂ ಈ‌ ಘಟನೆಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಜಯ್ಯಣ್ಣ ಪ್ರತಿಕ್ರಿಯಿಸಿದ್ದು, ಬಿಜೆಪಿ ಹತಾಶಗೊಂಡು ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

ಕಳೆದ ಏಪ್ರಿಲ್ 28ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ದಿನ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇಂದು ಮಧ್ಯಾಹ್ನ 2 ಗಂಟೆಗೆ 6 ಅಧಿಕಾರಿಗಳಿಂದ ಮತ್ತೆ ಪರಿಶೀಲನೆ ನಡೆದಿದೆ. ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Exit mobile version