Site icon PowerTV

ಎಣ್ಣೆ ಪ್ರಿಯರೇ ಇಲ್ಲಿ ಗಮನಿಸಿ : ರಾಜ್ಯದಲ್ಲಿ ಮೂರು ದಿನ ಸಿಗಲ್ಲ ಮದ್ಯ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರ್ನಾಲ್ಕು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರತ್ಯೇಕವಾಗಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಬಾರ್​​ಗಳು ಬಂದ್ ಆಗಿರಲಿದ್ದು, ಇಂದು ಸಂಜೆ 5 ಗಂಟೆಯಿಂದ ಮೇ 11ರ ಬೆಳಿಗ್ಗೆ 6ರವೆಗೆ ಎಲ್ಲಿಯೂ ಮದ್ಯ ಸಿಗುವುದಿಲ್ಲ. ಚುನಾವಣಾ ಫಲಿತಾಂಶದ ದಿನವಾದ ಮೇ 13ರ ಬೆಳಿಗ್ಗೆ 6 ಗಂಟೆಯಿಂದ ಮೇ 14ರ ಬೆಳಿಗ್ಗೆ 6ರವರೆಗೆ ಬಾರ್​ಗಳು ಬಂದ್ ಇರಲಿವೆ. ಈ ದಿನಗಳಂದು ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರಕ್ಕೆ ಆಯೋಗವು ಸೂಚನೆಯನ್ನು ನೀಡಿದೆ.

ಮತದಾನದ ದಿನ ಮತ್ತು ಮತ ಎಣಿಕೆ ದಿನಗಳನ್ನು ಶುಷ್ಕ ದಿನ ಎಂದು ಘೋಷಿಸಲಾಗಿದ್ದು, ಈ ದಿನದಂದು ಮದ್ಯ ತಯಾರಿಕೆ, ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆಯಿದ್ದು, ಎಲ್ಲೆಡೆ ಭಾರಿ ಬೇಡಿಕೆ ಎದುರಾಗಿದೆ. ಅಲ್ಲಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆ ಪಡೆದು ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ : ಮೇ 10 ಚುನಾವಣೆ, ಮೇ 13 ಫಲಿತಾಂಶ : ಇಲ್ಲಿದೆ ನೋಡಿ ಹೈಲೆಟ್ಸ್

ಮತದಾನ ಮತ್ತು ಮತ ಏಣಿಕೆಯ ಸಂದರ್ಭದಲ್ಲಿ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ, ಶುಷ್ಕ ದಿನ ಎಂದು ಘೋಷಿಸಲಾಗಿದೆ. ಮೇ.10ರಂದು ಮತದಾನ ನಡೆಯಲಿದ್ದು, ಮೇ.13ರಂದು ಫಲಿತಾಂಶ ಪ್ರಕಟವಾಗಲಿದೆ.

ಮತದಾನಕ್ಕೆ ವ್ಯವಸ್ಥೆ?

ಒಟ್ಟು ಕೇಂದ್ರಗಳು: 58,281

ಸರಾಸರಿ 883 ಮತದಾರರಿಗೆ ಒಂದು ಕೇಂದ್ರ

ನಗರ ಮತದಾನ ಕೇಂದ್ರಗಳು: 24,063

ಗ್ರಾಮೀಣ ಮತದಾನ ಕೇಂದ್ರಗಳು: 34,219

ಮಹಿಳಾ ಮತದಾನ ಕೇಂದ್ರಗಳು: 1,320

ಯುವ ಮತದಾನ ಕೇಂದ್ರಗಳು: 224

ಪಿಡಬ್ಲ್ಯುಡಿ ಮ್ಯಾನೇಜ್ ಮತ ಕೇಂದ್ರಗಳು: 224

ಮಾದರಿ ಮತ ಕೇಂದ್ರಗಳು: 240

ವೆಬ್ ಕಾಸ್ಟಿಂಗ್: 29,141 (50%)

Exit mobile version