Site icon PowerTV

ಇಂದು ನಟ ಸುದೀಪ್, ಶಿವಣ್ಣ ಪ್ರಚಾರ ಎಲ್ಲೆಲ್ಲಿ?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸ್ಯಾಂಡಲ್ ವುಡ್ ನಟ-ನಟಿಯರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಸೇರಿದಂತೆ ಖ್ಯಾತ ನಟರು ಪ್ರಚಾರದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇಂದು ಸಹ ಇವರ ರೋಡ್ ಶೋ ಮುಂದುವರಿಯಲಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಟ ಕಿಚ್ಚ ಸದೀಪ್ ಪ್ರಚಾರ ನಡೆಸಲಿದ್ದಾರೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಪರ ಹೊಳಲ್ಕೆರೆ, ಚಳ್ಳಕೆರೆ ಮತಕ್ಷೇತ್ರಗಳಲ್ಲಿ ರೋಡ್​ ಶೋ ನಡೆಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಭರಮಸಾಗರ ಗ್ರಾಮದಲ್ಲಿ, ಮಧ್ಯಾಹ್ನ 4 ಗಂಟೆಗೆ ಚಳ್ಳಕೆರೆ ಪಟ್ಟಣದಲ್ಲಿ ಮತಾಯಾಚಿಸಲಿದ್ದಾರೆ.

ಇದನ್ನೂ ಓದಿ : ಧೀರಜ್ ಮುನಿರಾಜು ಪರ ಕಿಚ್ಚ ಸುದೀಪ್ ಅಬ್ಬರದ ಪ್ರಚಾರ

ಬೀದರ್​​ನಲ್ಲಿ ಶಿವಣ್ಣ ಪ್ರಚಾರ

ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ ಖೇಣಿ ಪರ ಇಂದು ನಟ ಶಿವರಾಜ್​ ಕುಮಾರ್​ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಮನ್ನಾಖೇಳಿ, ಮಧ್ಯಾಹ್ನ 12ಕ್ಕೆ ನಿರ್ಣಾ, ಮಧ್ಯಾಹ್ನ 1.30ಕ್ಕೆ ಬೇಮಳಖೇಡಾದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಗೀತಾ ಶಿವರಾಜ್ ಕುಮಾರ್ ಅವರು ಸಾಥ್​​ ನೀಡಲಿದ್ದಾರೆ.

ಬೆಳಗಾವಿಯಲ್ಲಿ ಅಮಿತ್ ಶಾ ಪ್ರಚಾರ

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಬೆಳಗಾವಿ ಜಿಲ್ಲೆಯಲ್ಲಿ ಮತ ಬೇಟೆ ನಡೆಸಲಿದ್ದಾರೆ. ದಕ್ಷಿಣ ಕ್ಷೇತ್ರದ ವಡಗಾವಿಯ ಅರಳಿಕಟ್ಟೆಯಿಂದ ರೋಡ್ ಶೋ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಅಭಯ್​ ಪಾಟೀಲ್ ಪರ ಮತಯಾಚಿಸುತ್ತಿದ್ದಾರೆ. ರೋಡ್​ ಶೋ  ರೇಣುಕಾ ಹೋಟೆಲ್, ವಡಗಾವಿ ಮುಖ್ಯರಸ್ತೆ, ನಾಥ್ ಫೈ ವೃತ್ತ, ಶಹಾಪುರ ಖಡೇಬಜಾರ್ ಮಾರ್ಗವಾಗಿ ತೆರಳಿ ಶಹಾಪುರದ ಶಿವಚರಿತ್ರೆ ಬಳಿ ಅಂತ್ಯವಾಗಲಿದೆ.

Exit mobile version