Site icon PowerTV

‘ಯಡಿಯೂರಪ್ಪನವರು ಸಿಎಂ’ ಆಗಲು ಬಿ.ಸಿ ಪಾಟೀಲ್ ಕಾರಣ : ಬಿ.ವೈ ರಾಘವೇಂದ್ರ

ಹಾವೇರಿ : ನಿಮ್ಮ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಸಚಿವ ಬಿ.ಸಿ ಪಾಟೀಲ್ ಕಾರಣ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಹೇಳಿದರು.

ಹಾವೇರಿ ರಟ್ಟಿಹಳ್ಳಿಯಲ್ಲಿ ಕೃಷಿ ಸಚಿವ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ ಅವರು ಪ್ರಚಾರ ನಡೆಸಿದರು.

ರಟ್ಟಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಅವರು, ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತುಕೊಂಡ್ರು ಅಂತಾ ಕಾಂಗ್ರೆಸ್ ನವರು ಅಪಪ್ರಚಾರ ಮಾಡ್ತಿದ್ದಾರೆ. ಸಚಿವ ಬಿ.ಸಿ ಪಾಟೀಲ್ ಅವರು ಈಗಾಗಲೇ ಗೆದ್ದಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನಮ್ಮನ್ನು ನಿರ್ಲಕ್ಷಿಸಿತ್ತು

ಸಚಿವ ಬಿ.ಸಿ ಪಾಟೀಲ್ ಅವರು ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕಕ್ಷ ನಮ್ಮ ಭಾಗವನ್ನು ನಿರ್ಲಕ್ಷ್ಯ ಮಾಡಿತ್ತು. ನಾವು 17 ಜನ ರಾಜೀನಾಮೆ ಕೊಟ್ಟು ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದೆವು ಎಂದು ಹೇಳಿದರು.

ಇದನ್ನೂ ಓದಿ : ಹಿರೇಕೆರೂರು ‘ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿ’ಯಾಗಿದೆ : ಬಿ.ಸಿ ಪಾಟೀಲ್

ಅಭಿವೃದ್ಧಿಯಲ್ಲಿ ನಿಮ್ಮ ಪಾಲು ಏನು?

ನನಗೆ ಅರಣ್ಯ ಇಲಾಖೆ ಕೊಟ್ಟಿದ್ದರು. ಆಗ ನಾನು ಕೃಷಿ ಖಾತೆ ಕೊಡುವಂತೆ ಮನವಿ ಮಾಡಿದೆ. ಬಿ.ಎಸ್ ಯಡಿಯೂರಪ್ಪನವರು ನನಗೆ ಕೃಷಿ ಖಾತೆ ಕೊಟ್ಟರು. ನಾನು ಅನರ್ಹ ಆದಾಗ ಯುಬಿ ಬಣಕಾರ ಉಗ್ರಾಣ ನಿಗಮದ ಅಧ್ಯಕ್ಷರಾದರು. 2018ರಲ್ಲಿ ಭಯಂಕರ ಗಾಳಿ ಬೀಸಿತ್ತು. ಆಗಲೂ ನಾನು ಗೆದ್ದಿದ್ದೆ. ಇವರು ಸೋತು ಮನೆಯಲ್ಲಿ ಕುಳಿತಿದ್ದರು. ಅಭಿವೃದ್ಧಿಯಲ್ಲಿ ಇವರದ್ದು ಏನು ಪಾಲಿದೆ? ಉಗ್ರಾಣ ನಿಗಮದ ಅಧ್ಯಕ್ಷರಾಗಿ ಇವರು ಏನು ಅಭಿವೃದ್ಧಿ ಮಾಡಿಲ್ಲ ಎಂದು ಗುಡುಗಿದರು.

ಇದೇ ವೇಳೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಕರಿ ಗ್ರಾಮದ ನಾಯಕ ಹಾಗೂ ಮುಸ್ಲಿಂ ಸಮುದಾಯದ 70 ಹೆಚ್ಚು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಬಿ.ಸಿ ಪಾಟೀಲ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದರು.

Exit mobile version