Site icon PowerTV

ಸಿಲ್ಕ್ ಸಿಟಿಯಲ್ಲಿ ‘ಸೀಕಲ್ ರಾಮಣ್ಣ’ನಿಗೆ ಕಿಚ್ಚನ ಪವರ್

ಬೆಂಗಳೂರು : ಬಿಜೆಪಿ ಸ್ಟಾರ್ ಕ್ಯಾಂಪೇನರ್ ಕಿಚ್ಚ ಸುದೀಪ್ ಉತ್ತರ ಕರ್ನಾಟಕ ಒಂದು ರೌಂಡ್ ಹೊಡೆದು ಬಂದ್ರು. ಇಂದು ಸಿಲ್ಕ್ ಸಿಟಿ ಶಿಡ್ಲಘಟ್ಟಕ್ಕೆ ಎಂಟ್ರಿ ಕೊಟ್ಟಿದ್ದು, ಸೀಕಲ್ ರಾಮಚಂದ್ರ ಗೌಡ ಮತಯಾಚನೆ ಮಾಡಿದ್ರು. ಅಪಾರ ಜನಸಂದಣಿ ನಡುವೆ ಪಾದಯಾತ್ರೆ ಮೂಲಕ ಧೂಳೆಬ್ಬಿಸಿದ್ರು ಆಲ್ ಇಂಡಿಯಾ ಕಟೌಟ್.

ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಪರ ಮತಯಾಚನೆ ಮಾಡಿದ ಕಿಚ್ಚ ಸುದೀಪ್, ಶಿಡ್ಲಘಟ್ಟ ಟೌನ್ ಹಾಗೂ ದಿಬ್ಬೂರಹಳ್ಳಿಯಲ್ಲಿ ಸಹಸ್ರಾರು ಮಂದಿ ನಡುವೆ ಕೇಂದ್ರಬಿಂದು ಆದರು. ಗೆದ್ದೇ ಗೆಲ್ಲುವೆ ಒಂದು ದಿನ.. ಗೆಲ್ಲಲೇ ಬೇಕು ಒಳ್ಳೆಯತನ.. ಹೀಗಂತ ಚುನಾವಣಾ ಅಖಾಡದಲ್ಲಿ ನಿಂತು ಸಹಸ್ರಾರು ಮಂದಿಯ ನಡುವೆ ಕೂಗಿ ಹೇಳಿದ್ರು ಕಿಚ್ಚ ಸುದೀಪ್.

ದಿಬ್ಬೂರಹಳ್ಳಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು, ರಾಮಚಂದ್ರ ಗೌಡರು ವಿದ್ಯಾವಂತರು, ಉದ್ಯಮಿಗಳು, ಬುದ್ಧಿವಂತರು. ಮೊದಲ ಬಾರಿ ಚುನಾವಣೆಗೆ ನಿಂತಿದ್ದಾರೆ. ಇವ್ರು ದುಡ್ಡು ಇರೋರೇ ಆಗಿರೋದ್ರಿಂದ ದುಡ್ಡು ಮಾಡಲು ಬಂದಿಲ್ಲ. 10ನೇ ತಾರೀಖು ನಿಮ್ಮ ಮತ ಇವರಿಗೆ ನೀಡಿ ಎಂದು ಮನವಿ ಮಾಡಿದರು.

ಕಿಚ್ಚು ಹಚ್ಚಿದ ಸುದೀಪ್ ಡೈಲಾಗ್ಸ್

ನಂತ್ರ ಬಚ್ಚನ್ ಹಾಗೂ ವೀರ ಮದಕರಿ ಚಿತ್ರದ ಡೈಲಾಗ್ಸ್ ಹೊಡೆದ ಕಿಚ್ಚ, ಅಪಾರ ಜನಸ್ತೋಮಕ್ಕೆ ಜೋಶ್ ತುಂಬಿದರು. ಅಲ್ಲಿಂದ ನೇರವಾಗಿ ಶಿಡ್ಲಘಟ್ಟದಲ್ಲಿರೋ ಸೀಕಲ್ ರಾಮಚಂದ್ರ ಗೌಡರ ಕಚೇರಿ ಮಯೂರ ಸೇವಾಸೌಧಕ್ಕೆ ಬಂದು, ದೀರ್ಘ ಸಮಾಲೋಚನೆ ನಡೆಸಿದರು. ಬಳಿಕ ಸೇವಾಸೌಧದಿಂದ ಕೋಟೆ ಸರ್ಕಲ್ ವರೆಗೆ ರೋಡ್ ಶೋ ಮಾಡಿದರು.

ಅಪಾರ ಜನಸಂದಣಿಯಲ್ಲಿ ರ್ಯಾಲಿ ವಾಹನದಿಂದ ಕೆಳಗಿಳಿದು, ಸೀಕಲ್ ರಾಮಣ್ಣನೊಂದಿಗೆ ಕಿಲೋ ಮೀಟರ್ ಗಟ್ಟಲೆ ಪಾದಯಾತ್ರೆ ಮಾಡಿದ್ರು. ರಾಮಚಂದ್ರ ಗೌಡರನ್ನ ಕೈ ಹಿಡಿದು ನಡೆಸಿದ ಕಿಚ್ಚನೊಂದಿಗೆ ಸೆಲ್ಫಿಗೆ ಮುಗಿಬಿದ್ದ ಜನರನ್ನ ಅವಾಯ್ಡ್ ಮಾಡಲು ಪೊಲೀಸರು ಹರಸಾಹಸ ಮಾಡಿದರು.

ಗೌಡ್ರು ಕಪ್ಪಾಗುವುದನ್ನ ನೋಡಬೇಕು

ಶಿಡ್ಲಘಟ್ಟದ ಜನತೆಯಲ್ಲೂ ಸೀಕಲ್ ರಾಮಚಂದ್ರ ಗೌಡರ ಪರ ಮಾತನಾಡಿದ ಸುದೀಪ್, ನಿಮ್ಮ ಸೇವೆ ಮಾಡೋಕೆ ಬಂದಿದ್ದಾರೆ ಒಂದು ಅವಕಾಶ ಕೊಡಿ ಎಂದರು.‌ ಅಲ್ಲದೆ ಜನರ ಸೇವೆ ಮಾಡೋ ಮೂಲಕ ಅವ್ರು ಕಪ್ಪಾಗುವುದನ್ನು ನಾನು ನೋಡಬೇಕು ಅಂತ ಸಹೋದರ ಸಮಾನ ಸೀಕಲ್ ರಾಮಣ್ಣನ‌ ಕಾಲೆಳೆದರು.

ಒಟ್ಟಾರೆ ಇದೇ ಮೊದಲ ಬಾರಿ‌ ಸಿಲ್ಕ್ ಸಿಟಿಯಲ್ಲಿ ಕಮಲ‌ ಅರಳುವ ಮುನ್ಸೂಚನೆ ಸಿಕ್ಕಿದೆ. ನೆರೆದಿದ್ದ ಜನಸಾಗರ ನಿಜಕ್ಕೂ ರಾಮಚಂದ್ರ ಗೌಡರ ಗೆಲುವಿಗೆ ನಾಂದಿ ಹಾಡೋ ಲಕ್ಷಣಗಳು ಕಂಡಿವೆ. ಈ ಬಾರಿಯ ನಿರ್ಧಾರ ಬಿಜೆಪಿ ಸರ್ಕಾರ ಅನ್ನೋ ಮೋದಿ ಮಾತು ನಿಜವಾಗುತ್ತಾ ಅನ್ನೋದನ್ನು ನಿರೀಕ್ಷಿಸಬೇಕಿದೆ.

ಸೀಕಲ್ ರಾಮಚಂದ್ರ ಗೌಡರಿಗೆ ನಟ ಸುದೀಪ್ ಜೊತೆ ಕಬ್ಜ ಡೈರೆಕ್ಟರ್ ಆರ್ ಚಂದ್ರು, ಶಿಡ್ಲಘಟ್ಟ ಮಾಜಿ ಶಾಸಕ ರಾಜಣ್ಣ, ಕೋಲಾರ ಸಂಸದ ಮುನಿಸ್ವಾಮಿ, ಚಕ್ರವರ್ತಿ ಚಂದ್ರಚೂಡ್ ಸೇರಿದಂತೆ ಸಾಕಷ್ಟು ಮಂದಿ ಸಾಥ್ ನೀಡಿದರು.

Exit mobile version