Site icon PowerTV

ಕಳ್ಳತನದ ಸರ್ಕಾರ ಕಳ್ಳತನವನ್ನೇ ಮಾಡೋದು : ರಾಹುಲ್ ಗಾಂಧಿ

ಬೆಂಗಳೂರು : ಕಳ್ಳತನದ ಸರ್ಕಾರ ಕಳ್ಳತನವನ್ನೇ ಮಾಡೋದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿ ಮಾತನಾಡಿರುವ ಅವರು, ಇಡೀ ದೇಶದಲ್ಲೇ ಅತೀ ಭ್ರಷ್ಟ ಸರ್ಕಾರ ಇದ್ದರೆ ಬಿಜೆಪಿ ಸರ್ಕಾರ. ಶಾಸಕರನ್ನು ಖರೀದಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ ಎಂದು ಗುಡುಗಿದರು.

40% ಕಮಿಷನ್ ಬಗ್ಗೆ ಗುತ್ತಿಗೆದಾರರು ಮೋದಿಗೆ ಪತ್ರ ಬರೆದಿದ್ದರು. ಪ್ರಧಾನಿಯವರೇ ಭ್ರಷ್ಟಾಚಾರ ವಿರುದ್ಧ ಏನು ಕ್ರ‌ಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ‘ಹೃದಯದಲ್ಲಿ ಇರುವುದನ್ನೇ ಹೇಳ್ತಾರೆ’ : ಕುಮಾರಸ್ವಾಮಿ

ಹುಬ್ಬಳ್ಳಿಗೆ ಆಗಮಿಸಿದ ಸೋನಿಯಾ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಜಗದೀಶ್ ಶೆಟ್ಟರ್ ಪರ ಪ್ರಚಾರಕ್ಕೆ ಇಂದು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಏರ್​​ಪೋರ್ಟ್​ನಿಂದ ಖಾಸಗಿ ಹೋಟೆಲ್​ಗೆ ತೆರಳಿದ್ದಾರೆ. ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ.

ಘೋರ ಪರಿಣಾಮ ಎದುರಿಸಬೇಕಾಗುತ್ತೆ

ದೇಶಕ್ಕಾಗಿ ಕಾಂಗ್ರೆಸ್ ನಾಯಕರು ಬಲಿದಾನಗೈದಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಂತಹ ನಮ್ಮ ಅತ್ಯಮೂಲ್ಯ ನಾಯಕರನ್ನು ಕಳೆದುಕೊಂಡಿದ್ದೇವೆ. ಅಪ್ಪಿ ತಪ್ಪಿಯೂ ಮಲ್ಲಿಕಾರ್ಜುನ ಖರ್ಗೆ ಅವರ ಒಂದು ಹನಿ ರಕ್ತ ನೆಲಕ್ಕೆ ಚೆಲ್ಲಿದ್ದೇ ಆದರೆ, ಬಿಜೆಪಿ ಅತಿ ಘೋರವಾದ ಪರಿಣಾಮ ಎದುರಿಸಬೇಕಾಗುತ್ತದೆ, ಎಚ್ಚರವಿರಲಿ. ಇದು ‘ಭೀಮ’ನ ನೆಲ ಎಂಬುದು ನೆನಪಿರಲಿ ಎಂದು ರಾಜ್ಯ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ಖರ್ಗೆ ಕೊಲ್ಲುವಷ್ಟು ದ್ವೇಷ ಏಕೆ?

ಬಿಜೆಪಿಗೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕೊಲ್ಲುವಷ್ಟು ದ್ವೇಷ ಏಕೆ? ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಮುನ್ನುಡಿ ಬರೆದಿದ್ದಕ್ಕಾ? ಆರ್ಟಿಕಲ್ 371ಜೆ ಜಾರಿಗೋಸ್ಕರ ಹೋರಾಡಿ ಯಶಸ್ವಿಯಾಗಿದ್ದಕ್ಕಾ? ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಕ್ಕಾ? ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದಕ್ಕಾ? ದುರಾಡಳಿತವನ್ನು ಪ್ರಶ್ನಿಸಿದ್ದಕ್ಕಾ? ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.

Exit mobile version