Site icon PowerTV

ಇವನಿಗೆ ‘ಮೀಸೆ ಕೂಡಾ ಬಂದಿಲ್ಲ, ಅಯೋಗ್ಯ’ : ಖರ್ಗೆ ವಿರುದ್ಧ ಈಶ್ವರಪ್ಪ ಕಿಡಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನಾಲಾಯಕ್’ ಎಂದು ಮೂದಲಿಸಿದ್ದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕೆರಳಿ ಕೆಂಡವಾಗಿದ್ದಾರೆ.

ಬೀದರ್​​​ನಲ್ಲಿ ಮಾತನಾಡಿದ ಅವರು, ಚಿತ್ತಾಪುರದ ಕಾಂಗ್ರೆಸ್​​ ಅಭ್ಯರ್ಥಿ ಪ್ರಿಯಾಂಕ್ ಖರ್ಗೆಯನ್ನು ಜಿರಳೆಗೆ ಹೋಲಿಸಿದ್ದಾರೆ. ಇನ್ನೂ ಅವನಿಗೆ ಮೀಸೆ ಕೂಡಾ ಬಂದಿಲ್ಲ. ಇವನು ನಮ್ಮ ಪ್ರಧಾನಿಗಳನ್ನು ನಾಲಾಯಕ್ ಎನ್ನುತ್ತಾನೆ. ಇವನ್ನು ಎಷ್ಟರಮಟ್ಟಿಗೆ ಅಯೋಗ್ಯ ಇರಬೇಕು‌ ಎಂದು ಏಕವಚನದಲ್ಲಿ ಖರ್ಗೆಗೆ ಈಶ್ವರಪ್ಪ ಬೈದಿದ್ದಾರೆ.

ಚುನಾವಣೆಯಲ್ಲಿ ಠೇವಣಿ ಕಳೆಯುತ್ತಾರೆ

ಪ್ರಧಾನಿ ನರೇಂದ್ರ ಮೋದಿ ಎಲ್ಲಿ, ಪ್ರಿಯಾಂಕ್ ಖರ್ಗೆ ಎಲ್ಲಿ? ರಾಜ್ಯದ ಜನರ ಕ್ಷೇಮೆ ಕೇಳಬೇಕು. ಇಲ್ಲವಾದರೆ ಈ ಚುನಾವಣೆಯಲ್ಲಿ ಜನರು ಪ್ರಿಯಾಂಕ್ ಖರ್ಗೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಠೇವಣಿ ಕಳೆಯುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ‘ಜೈ ಬಜರಂಗಬಲಿ’ ಎಂದು ಹೇಳಿದರೆ ಕಾಂಗ್ರೆಸ್ ಅಲ್ಲಾಡುತ್ತೆ : ಪ್ರಧಾನಿ ಮೋದಿ

ಸತ್ತಿರೋ ಹೆಣಕ್ಕೆ ಗುಂಡು ಹೊಡಿತಾರೆ

ಕಾಂಗ್ರೆಸ್ ನವರು ಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಾರೆ. ಬಜರಂಗದಳವನ್ನು ಪಿಎಫ್ ಐ(PFI)ಗೆ ಹೋಲಿಕೆ ಮಾಡುತ್ತಾರೆ. ಪಿಎಫ್ ಐ ರಾಷ್ಟದ್ರೋಹ ಸಂಸ್ಥೆ ಎಂದು ಬ್ಯಾನ್ ಮಾಡಿದ್ದೇವೆ. ಸತ್ತೋಗಿರೋ ಹೆಣಕ್ಕೆ ಮೊತ್ತೊಂದು ಬಾರಿ ಗುಂಡು ಹೊಡೆಯುತ್ತಾರೆ ಎಂದು ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.

ಬ್ಯಾನ್ ಆಗಿರೋ ಸಂಸ್ಥೆಯನ್ನು ಯಾರಾದರೂ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರಾ? ವರುಣಾದಲ್ಲಿ ನಾವು ಸಿದ್ದರಾಮಯ್ಯನ ಸೋಲಿಸಲ್ಲಾ. ಅವರೇ ತಮ್ಮ ಸೋಲನ್ನು ತಿರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

Exit mobile version