Site icon PowerTV

ಸೀಕಲ್ ರಾಮಚಂದ್ರಗೌಡರಿಗೆ ಕಾಂಗ್ರೆಸ್ ನಾಯಕರ ಬೆಂ’ಬಲ’

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಶಿಡ್ಲಘಟ್ಟದಲ್ಲಿ ಪಕ್ಷಾಂತರವಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಶಿಡ್ಲಘಟ್ಟದ ಬಿಜೆಪಿ ಕಚೇರಿ ಸೇವಾಸೌಧದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಕೇಶವಮೂರ್ತಿ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷ ತೊರೆದು ಸೀಕಲ್ ರಾಮಚಂದ್ರಗೌಡ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಕೇಶವ ಮೂರ್ತಿ ಅವರು, ಈ ಬಾರಿ ಶಿಡ್ಲಘಟ್ಟದಲ್ಲಿ ಬಿಜೆಪಿ ಬಾವುಟ ಹಾರಿಸುವುದು ಪಕ್ಕ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಪ್ರಸಾದ್, ಸುಬ್ರಮಣಿ, ನಂಜುಂಡಪ್ಪ, ಜಗದೀಶ್, ಪುನೀತ್ ಕುಮಾರ್, ಲೇಡೀಸ್ ಟೈಲರ್ ಮೂರ್ತಿ ಮತ್ತು ಮಂಜುನಾಥ್ ಅವರು ಸೀಕಲ್ ರಾಮಚಂದ್ರಗೌಡರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿ, ಸ್ವಯಂ ಪ್ರೇರಿತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.

ಇದನ್ನೂ ಓದಿ : ಸಚಿವ ಸುಧಾಕರ್ ಪರ ಕಿಚ್ಚ ಸುದೀಪ್ ರೋಡ್ ಶೋ

ಈ ಸಂದರ್ಭದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕರಾದ ಎಂ.ರಾಜಣ್ಣ, ಕನಕ ಪ್ರಸಾದ್ ಮತ್ತು ಚಿಕನ್ ವಿಜಿ ಉಪಸ್ಥಿತರಿದ್ದರು.

ಜೆಡಿಎಸ್ ಮುಖಂಡ ಬಿಜೆಪಿ ಸೇರ್ಪಡೆ

ಜೆಡಿಎಸ್ ನ ಮಾಜಿ ಅಧ್ಯಕ್ಷರು ಆದ ಕೆ.ಬಾಲ ಪ್ರಕಾಶ್ ಅವರು ಶಿಡ್ಲಘಟ್ಟ ಬಿಜೆಪಿ ಕಚೇರಿ ಸೇವಾಸೌಧ ದಲ್ಲಿ ಸೀಕಲ್ ರಾಮಚಂದ್ರಗೌಡ ಮತ್ತು ಮಾಜಿ ಶಾಸಕ ರಾಜಣ್ಣ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ನೂತನವಾಗಿ ಪಕ್ಷ ಸೇರ್ಪಡೆಯಾದವರಿಗೆ ಪಕ್ಷದ ಶಾಲು ಹಾಗೂ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

Exit mobile version