Site icon PowerTV

‘ಡಿಕೆಶಿ ಹೆಲಿಕ್ಯಾಪ್ಟರ್’ಗೆ ಹದ್ದು ಬಡಿದಿದ್ದು, ಕೇವಲ ಮುನ್ಸೂಚನೆ ಮಾತ್ರ : ಆರ್.ಅಶೋಕ್

ಬೆಂಗಳೂರು : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ವಿಚಾರವಿದ್ದು, ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಡಿಕೆಶಿ ಹೆಲಿಕಾಪ್ಟರ್ ಅವಘಡವನ್ನು ಲಿಂಕ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಆರ್.ಅಶೋಕ್ ಅವರು, ‘ಡಿ.ಕೆ ಶಿವಕುಮಾರ್ ಹೆಲಿಕ್ಯಾಪ್ಟರ್ ಗೆ ಹದ್ದುಬಡಿದು ಅನಾಹುತವಾಗಿದೆ. ಇದು ಮುನ್ಸೂಚನೆ ಮಾತ್ರ’ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಪ್ರಸ್ತಾವನೆ ಮಾಡಿದ ಮರುಕ್ಷಣವೇ ಅದರ ಪರಿಣಾಮ ಏನು ಅನ್ನೋದು ಗೊತ್ತಾಗಿದೆ. ಗರುಡ ಮತ್ತು ಆಂಜನೇಯ ಇಬ್ಬರೂ ಸಹ ಮಹಾವಿಷ್ಣುವಿನ ಭಂಟರು ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ನಿಮ್ಮ ಮೇಲೆ ಹನುಮಭಕ್ತರು ಮುಗಿಬೀಳ್ತಾರೆ

24 ಗಂಟೆಯೊಳಗಾಗಿ ಕಾಂಗ್ರೆಸ್ ನಾಯಕರು ಬಜರಂಗದಳ ನಿಷೇಧದ ಪ್ರಸ್ತಾವನೆಯನ್ನು ಹಿಂದೆ ಪಡೆಯಬೇಕು. ಇಲ್ಲದೆ ಇದ್ದರೆ, ಹೇಗೆ ಹನುಮಂತ ಲಂಕೆಯನ್ನು ಸುಟ್ಟನೋ ಅದೇ ರೀತಿ ಎಲ್ಲ ಹನುಮಭಕ್ತರು ಕಾಂಗ್ರೆಸ್ಸಿಗರ ಮೇಲೆ ಮುಗಿಬೀಳುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಸಿದ್ದ’ರಾಮ’ಯ್ಯಗೆ ‘ರಾಮ ಬೇಕು ಆಂಜನೇಯ’ ಬೇಡ್ವೇ? : ಬಿ.ಸಿ ಪಾಟೀಲ್ ಕಿಡಿ

ಈಗಾಗಲೇ ಬಜರಂಗದಳದ ಆಧ್ಯಕ್ಷರು ನಾಯಿ ಬಿಡುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ಅದಕ್ಕಿಂತ ಕಷ್ಟವಾಗುತ್ತದೆ. ಕಾಂಗ್ರೆಸ್ ನಾಯಕರ ಈ ನಡೆಯಿಂದ ಬಿಜೆಪಿಗೆ ವರವಾಗಲಿದೆ. ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಉತ್ತರಿಸದೆ ಜಾರಿಕೊಂಡ​ ಖರ್ಗೆ

ಇನ್ನೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು​​ ಸ್ಪಷ್ಟನೆ ನೀಡಿದ್ದಾರೆ. ನಾನು ಮಾತನಾಡುವುದಿಲ್ಲ ಎಂದು ಜಾರಿಕೊಂಡಿದ್ದಾರೆ.

Exit mobile version