Site icon PowerTV

‘ನನಗೆ ಹುಡ್ಗ ಬೇಕು, ಸ್ವಯಂವರ’ ಏರ್ಪಾಟು ಮಾಡಿ : ನಟಿ ರಮ್ಯಾ

ಮಂಡ್ಯ : ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ತಮ್ಮ ಮದುವೆ ವಿಚಾರದ ಕುರಿತು ಮತ್ತೆ ಸುದ್ದಿಯಾಗಿದ್ದು, ‘ನನಗೆ ಹುಡುಗ ಬೇಕು, ಸ್ವಯಂವರ ಏರ್ಪಾಟು ಮಾಡಿ’ ಎಂದು ಹೇಳಿದ್ದಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣೆ ಪ್ರಚಾರಕ್ಕಾಗಿ ನಟಿ ರಮ್ಯಾ ಆಗಮಿಸಿದ್ದರು. ಈ ವೇಳೆ ಮೇಡಂ, ನಿಮ್ಮ ಮದುವೆ ಯಾವಾಗ ಎಂದು ಮದುವೆ ವಿಚಾರ ಪ್ರಸ್ತಾಪ ಮಾಡಿದವರಿಗೆ ನಗು ನಗುತ್ತಲೇ ಉತ್ತರ ನೀಡಿದ್ದಾರೆ.

‘ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ. ನನಗೂ ಹುಡುಗನ್ನು ನೋಡಿ ನೋಡಿ ಸಾಕಾಗಿದೆ. ನನಗೆ ಗೌಡರ ಹುಡುಗ ಸಿಕ್ತಾನೆ ಅಂದ್ರೆ ಹುಡುಕಿ. ಮಂಡ್ಯದಲ್ಲೇ ಸ್ವಯಂವರ ಏರ್ಪಾಟು ಮಾಡಿ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ : ಹೊಸ ಕಾರಿನಲ್ಲಿ ಯಾವಾಗ ಕರ್ಕೊಂಡ್ ಹೋಗ್ತೀರಾ? : ರಮ್ಯಾ ಸ್ವೀಟ್ ಪ್ರಶ್ನೆಗೆ ಡಾಲಿ ತಬ್ಬಿಬ್ಬು

ಗೌಡರ ಹುಡುಗನನ್ನು ಹುಡುಕಿ

ನಾನು ಮದುವೆಯಾಗಲು ಸಿದ್ಧಳಿದ್ದೇನೆ. ನೀವೇ ಹುಡುಗನನ್ನು ಹುಡುಕಿ. ಬೇಕಿದ್ರೆ, ಸ್ವಯಂವರ ಏರ್ಪಡಿಸಿ ಗೌಡರ ಹುಡುಗನನ್ನು ಹುಡುಕಿ. ನಾನು ಮಂಡ್ಯದ ಜನರನ್ನು ತುಂಬಾ ಗೌರವಿಸುತ್ತೇನೆ, ಪ್ರೀತಿಸುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ನಾನು ಸಂಕಷ್ಟದಲ್ಲಿದ್ದಾಗ ಮಂಡ್ಯದ ಜನತೆ ನನಗೆ ಸಹಾಯ ಮಾಡಿದ್ದಾರೆ. ಅಲ್ಲದೆ ನನ್ನ ತಾಯಿ ಮಂಡ್ಯದವರೇ, ನಾನು ಹುಟ್ಟಿದ್ದೂ ಇಲ್ಲಿಯೇ. ಮಂಡ್ಯ ಜನತೆಯೊಂದಿಗೆ ನನಗೆ ಕೌಟುಂಬಿಕ ಸಂಬಂಧವಿದೆ. ಹಾಗಾಗಿ ನಾನು ಈಗಲೂ ಗೌಡ್ತಿಯೇ, ಮುಂದೆಯೂ ಗೌಡ್ತಿಯಾಗಿಯೇ ಇರುವೆ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.

Exit mobile version