Site icon PowerTV

ಸಮೃದ್ಧಿ ಮಂಜುನಾಥ್ ಗೆಲುವಿಗೆ ಪತ್ನಿ ಪದ್ಮ ಪ್ರಾರ್ಥನೆ

ಬೆಂಗಳೂರು : ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ಪರವಾಗಿ ಪತ್ನಿ ಪದ್ಮ ಮಂಜುನಾಥ್ ಅಬ್ಬರದ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.

ಮುಳಬಾಗಿಲು ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಪತಿ ಹಾಗೂ ಜೆಡಿಎಸ್ ಅಭ್ಯರ್ಥಿ ಪರವಾಗಿ ಪದ್ಮ ಮಂಜುನಾಥ್ ಮತ ಕೇಳುತ್ತಿದ್ದಾರೆ. ಸಮೃದ್ಧಿ ಮಂಜುನಾಥ್ ಪತ್ನಿ ಪದ್ಮ ಅವರ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಮುಳಬಾಗಿಲು ಪಟ್ಟಣದಲ್ಲಿ ಮಹಿಳೆಯರು ಸೋಮವಾರ ವಾರ್ಡ್ ವಾರು ಪ್ರಚಾರ ಕೈಗೊಂಡಿದ್ದಾರೆ. ದಿವಂಗತ ಆಲಂಗೂರು ಶ್ರೀನಿವಾಸ ಅವರ ಪುತ್ರಿ ಡಾ.ಭವಾನಿ ಅವರು ಸಮೃದ್ಧಿ ಮಂಜುನಾಥ್ ಪತ್ನಿ ಪದ್ಮ ಮಂಜುನಾಥ್ ಅವರಿಗೆ ಸಾಥ್ ನೀಡಿದರು.

ಇದನ್ನೂ ಓದಿ : ‘ತಾಯಿ ಪ್ರೀತಿ’ ನೆನೆದು ಸಮೃದ್ಧಿ ಮಂಜುನಾಥ್ ಭಾವುಕ

ರಾಜ್ಯದ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಉತ್ತಮ ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲಿಸುವಂತೆ ಪದ್ಮ ಮನವಿ ಮಾಡಿದರು. ಮುಳಬಾಗಲು ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಡಾ.ಭವಾನಿ ಮನವಿ ಮಾಡಿದರು. ಮತ ಕೇಳಲು ಮನೆಗೆ ಬಂದ ನಾಯಕಿಯರಿಗೆ ಕುಂಕುಮ ಕೊಡುವ ಮೂಲಕ ಮತದಾರರು ಶುಭ ಹಾರೈಸಿದರು.

ಪ್ರಚಾರ ಮಾಡುವ ಸಮಯದಲ್ಲಿ ಪ್ರತಿ ಮನೆಯಲ್ಲೂ ಬಾಗಿನ ನೀಡಿ ಮಹಿಳೆಯರು ಜೆಡಿಎಸ್ ಗೆಲುವಿನ ಭರವಸೆಯೊಂದಿಗೆ ಆಶೀರ್ವಾದ ಮಾಡಿದರು. ಇದೇ ವೇಳೆ ಪದ್ಮ ಹಾಗೂ ಡಾ.ಭವಾನಿ ಅವರು ಗೋಪೂಜೆ ಮಾಡಿ ಆಶೀರ್ವಾದ ಪಡೆದು ಪ್ರಚಾರ ಮುಂದುವರೆಸಿದರು.

ಮತ್ತೊಂದೆಡೆ, ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು, ಆವನಿ ಹೋಬಳಿ, ಹನುಮನಹಳ್ಳಿ ಪಂಚಾಯಿತಿ, ಅನಂತಪುರ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಪ್ರಚಾರ ನಡೆಸಿದರು. ಈ ವೇಳೆ ತಾಲ್ಲೂಕು ಮುಖಂಡರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version