Site icon PowerTV

‘ದುಡ್ಡು ಮಾಡೋ ಆಸೆ’ ನನಗೆ ಇಲ್ಲ : ಸೀಕಲ್ ರಾಮಚಂದ್ರ ಗೌಡ

ಬೆಂಗಳೂರು : ದುಡ್ಡು ಮಾಡೋ ಆಸೆ ನನಗೆ ಇಲ್ಲ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಹೇಳಿದರು.

ಪಲಿಚೆರ್ಲು ಪಂಚಾಯಿತಿ ವ್ಯಾಪ್ತಿಯ ದೊಗರನಾಯಕನಹಳ್ಳಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸೀಕಲ್ ರಾಮಚಂದ್ರ ಗೌಡ ಅವರು ಮಾತನಾಡಿದರು.

ಅಭಿವೃದ್ಧಿಯನ್ನೇ ಕಾಣದ ಈ (ಶಿಡ್ಲಘಟ್ಟ) ಕ್ಷೇತ್ರಕ್ಕೆ ಬಂದಿರುವುದು ಅಭಿವೃದ್ಧಿ ಮಾಡೋಕೆ ಅಷ್ಟೇ. ನಾನು ಒಬ್ಬ ವ್ಯಾಪಾರಸ್ಥ ಬೆಂಗಳೂರಿನಲ್ಲಿ ನನ್ನ ವ್ಯಾಪಾರ ಇದೆ. ದುಡ್ಡು ಮಾಡೋ ಆಸೆ ನನಗೆ ಇಲ್ಲ ಎಂದು ಸೀಕಲ್ ರಾಮಚಂದ್ರ ಗೌಡ ಹೇಳಿದರು.

ಇದನ್ನೂ ಓದಿ : ಅಮೃತವನ್ನು ನೀಡುವ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಿದ್ದೇವೆ : ಸಿಎಂ ಬೊಮ್ಮಾಯಿ

ಹೂಟ್ಟೂರಿಗೆ ಏನಾದ್ರೂ ಕೊಡುಗೆ ನೀಡ್ಬೇಕು

ನಾನು ಹುಟ್ಟಿದ ಊರು, ನನ್ನ ಜನ್ಮ ಭೂಮಿಗೆ ಏನಾದರೂ ಕೊಡುಗೆ ನೀಡಬೇಕು. ಇದೇ ಕಾರಣದಿಂದಾಗಿ ನಾನು ಇಲ್ಲಿಗೆ ಬಂದಿದ್ದೀನಿ. ನಿಮ್ಮೆಲ್ಲರ ಸೇರ್ಪಡೆ ನನಗೆ ಆನೆ ಬಲ ತಂದಿದೆ. ಕ್ಷೇತ್ರದಲ್ಲಿ ಬಿಜೆಪಿ ಪರ ಜನರಿಗೆ ಒಲವಿದೆ. ಪ್ರಚಾರಕ್ಕೆ ಹೋದಲೆಲ್ಲಾ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ದೊಗರನಾಯಕನಹಳ್ಳಿ ಗ್ರಾಮದ ಮುಖಂಡರಾದ ಆಂಜನೇಯ ರೆಡ್ಡಿ, ಗೋವಿಂದು, ಮಂಜುನಾಥ್, ಚೆನ್ನಕೇಶವ ಮುನಿವೆಂಕಟಪ್ಪ, ಅಶೋಕ, ಸೋಮಣ್ಣ ಅವರ ನೇತೃತ್ವದಲ್ಲಿ ದೇವಪ್ಪ, ಶ್ರೀಧರ್, ನರಸಿಂಹಪ್ಪ, ರಾಮಪ್ಪ, ಗಂಗಪ್ಪ, ಈರಪ್ಪ, ಸೌಮ್ಯ, ಗೀತಾ, ಧನಲಕ್ಷ್ಮೀ, ಅರ್ಚಿತಾ, ಸಾಗರಿಕ, ಗೌರಮ್ಮ, ಕುಮಾರ್ ಸೇರಿದಂತೆ 50ಕ್ಕೂ ಹೆಚ್ಚು ಜನರು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಶಾಲು ಧರಿಸಿ ಪಕ್ಷಕ್ಕೆ ಜೈಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ರಾಜಣ್ಣ, ಖ್ಯಾತ ನಿರ್ದೇಶಕ ಆರ್.ಚಂದ್ರು ಮತ್ತು ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.

Exit mobile version