Site icon PowerTV

ಬಿಜೆಪಿ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ : ಕೇಸರಿ ಕಲಿಗಳಿಂದ ಭರಪೂರ ಆಶ್ವಾಸನೆಗಳು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.

ಸಮೃದ್ಧ ಕರ್ನಾಟಕಕ್ಕಾಗಿ ರಾಜ್ಯದ ಜನತೆಯಿಂದಲೇ, ರಾಜ್ಯದ ಜನತೆಗಾಗಿ, ರಾಜ್ಯದ ಜನತೆಗೋಸ್ಕರ ಅವರ ಸಲಹೆಗಳ ಆಧಾರದಲ್ಲಿ ‘ಬಿಜೆಪಿ ಪ್ರಜಾ ಪ್ರಣಾಳಿಕೆ 2023’ ರೂಪಿಸಲಾಗಿದೆ.

ಅರ್ಧ ಲೀಟರ್ ನಂದಿನಿ ಹಾಲು ಉಚಿತ

ಬಿಪಿಎಲ್ ಕಾರ್ಡ್ ಇರುವ ಪ್ರತೀ ಕುಟುಂಬಕ್ಕೆ ಪೋಷಣಾ ಯೋಜನೆ ಅಡಿ ನಿತ್ಯ ಅರ್ಧ ಲೀಟರ್ ಹಾಲನ್ನು ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ನಗರ ಪ್ರದೇಶದಲ್ಲಿ 5 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸುತ್ತೇವೆ. ಇದಲ್ಲದೆ ಪಡಿತರ ಕಾರ್ಡು ಹೊಂದಿರುವ ಕುಟುಂಬಗಳಿಗೆ 5 ಕೆಜಿ ಅಕ್ಕಿ ಜತೆಗೆ 5 ಕೆಜಿ ಸಿರಿಧಾನ್ಯವನ್ನೂ ವಿತರಿಸುತ್ತೇವೆ. ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವವನ್ನು 10 ಲಕ್ಷ ರೂ.ಗೆ ಏರಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸಂಸದ ಡಿ.ವಿ ಸದಾನಂದಗೌಡ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್​​ ಹಾಗೂ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ನ ‘ಗುಜರಿ ಇಂಜಿನ್’ನಿಂದ ಅಭಿವೃದ್ಧಿ ಅಸಾಧ್ಯ : ಪ್ರಧಾನಿ ಮೋದಿ

ಪ್ರಜಾ ಪ್ರಣಾಳಿಕೆಯ ಪ್ರಮುಖ ಅಂಶಗಳು

Exit mobile version