Site icon PowerTV

ಇಂದು ‘ಕಿಚ್ಚ ಸುದೀಪ್’ ರೋಡ್ ಶೋ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಬೆಳಗಾವಿಯಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಬೆಳಗಾವಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ನಟ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಿದ್ದಾರೆ. ಕಿತ್ತೂರು, ಬೆಳಗಾವಿ ಗ್ರಾಮೀಣ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದ ಮೂಲಕ ಕೇಸರಿ ಕಲಿಗಳ ಪರ ಮತ ಬೇಟೆ ನಡೆಸಲಿದ್ದಾರೆ.

ಎಲ್ಲೆಲ್ಲಿ ಸುದೀಪ್‌ ಪ್ರಚಾರ?

ಬೆಳಗ್ಗೆ 10.40ಕ್ಕೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಪ್ರಯಾಣ

ಬೆಳಗ್ಗೆ 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಸುದೀಪ್ ರೋಡ್ ಶೋ

ಬೆಳಗ್ಗೆ 11.20ರಿಂದ ಮಧ್ಯಾಹ್ನ 2.30ರವರೆಗೆ ಕಿಚ್ಚ ರೋಡ್ ಶೋ

ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಪ್ರಚಾರ

ಮಧ್ಯಾಹ್ನ 1 ಗಂಟೆಯಿಂದ 1.50ರವರೆಗೆ ಸುಳೇಭಾವಿ ಗ್ರಾಮದಲ್ಲಿ ರೋಡ್ ಶೋ

ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ್ ಪರ ಪ್ರಚಾರ

ಸಂಜೆ 4 ರಿಂದ 5ರವರೆಗೆ ಯಮಕನಮರಡಿಯಲ್ಲಿ ಸುದೀಪ್ ರೋಡ್ ಶೋ

ಯಮಕನಮರಡಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಯಾಚನೆ

ಇದನ್ನೂ ಓದಿ : ನಟ ಸುದೀಪ್, ದರ್ಶನ್ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ

ಸಂಜೆ 5.30ರಿಂದ 6.30ರವರೆಗೆ ಬೆಳಗಾವಿ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ

ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ್ ಪರ ಪ್ರಚಾರ

ಸಂಜೆ 6.40 ರಿಂದ 7.30ರವರೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ರೋಡ್ ಶೋ

ಬೆಳಗಾವಿ ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಪರ ಮತಯಾಚನೆ

ಸಂಜೆ 7.40ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್‌ಗೆ ಆಗಮಿಸುವ ಸುದೀಪ್

ಇಂದು ಬೆಳಗಾವಿಯಲ್ಲಿಯೇ ವಾಸ್ತವ್ಯ ಹೂಡಲಿರುವ ನಟ ಸುದೀಪ್

Exit mobile version