Site icon PowerTV

ಕುಮಾರಣ್ಣ, ‘ಎಲ್ಲಾ ಟೈಮ್ ಅಲ್ಲೂ ಲಾಟರಿ ಹೊಡೆಯಲ್ಲಾ’ : ಸಿ.ಟಿ ರವಿ ಟಕ್ಕರ್

ಬೆಂಗಳೂರು : ಕುಮಾರಣ್ಣ ಅವರೇ ಎಲ್ಲಾ ಟೈಮ್ ನಲ್ಲೂ ಲಾಟರಿ ಹೊಡೆಯಲ್ಲಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಟಕ್ಕರ್ ಕೊಟ್ಟರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಇಬ್ಬೀಡು ಬಳಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

‘ಹೊಯ್ಸಳ ಶಿಲ್ಪಕಲೆಗಳ ಬೀಡಿನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು’. ಕರ್ನಾಟಕದ ಮಠ ಪರಂಪರೆಯ ಎಲ್ಲ ಸ್ವಾಮೀಜಿಗಳಿಗೂ ನಮನ. ಇತ್ತೀಚೆಗೆ ನಮ್ಮನ್ನಗಲಿದ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಪಾದಾರವಿಂದಗಳಿಗೆ ನನ್ನ ನಮನಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ಅನೇಕ ಬಾರಿ ಕರ್ನಾಟಕ್ಕೆ ಬಂದಾಗ ನನಗೆ ಎಲ್ಲೇ ಹೋದರೂ ಒಂದೇ ಧ್ವನಿ, ಒಂದೇ ಸಂಕಲ್ಪ ಕೇಳಿಸುತ್ತದೆ. ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂಬ ವಾತಾವರಣ ಹಾಸನದಲ್ಲಿಯೂ ನನಗೆ ಕಾಣುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಜೆಡಿಎಸ್​, ಕಾಂಗ್ರೆಸ್ ಪಕ್ಷದ ‘ಬಿ ಟೀಂ’

ಜೆಡಿಎಸ್​ ಪಕ್ಷ ಕಾಂಗ್ರೆಸ್ ಪಕ್ಷದ ಬಿ ಟೀಂ ಆಗಿದೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಇಲ್ಲಿ ನಿಮ್ಮೆಲ್ಲರನ್ನೂ ನೋಡಿದಾಗ ಅದೇ ಉತ್ಸಾಹ ಕಂಡುಬರುತ್ತಿದೆ. ಈ ಬಾರಿ ಕರ್ನಾಟಕದ ಮತದಾರರು ನಿರ್ಧಾರ ಮಾಡಿಬಿಟ್ಟಿದ್ದಾರೆ. ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ ಎಂದು ಬಿಜೆಪಿ ಘೋಷ ವಾಕ್ಯವನ್ನು ಪುನರುಚ್ಚರಿಸಿದರು.

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ

ಈಗಾಗಲೇ ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ವಿಫಲ ಆಡಳಿತ ನೋಡಿದ್ದೇವೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕೈ ಅಧಿಕಾರಕ್ಕೆ ಬಂದ್ರೆ 85% ಲೂಟಿ

ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ 85% ಲೂಟಿ ಹೊಡೆಯುತ್ತದೆ. ಕಾಂಗ್ರೆಸ್​ ಪಕ್ಷಕ್ಕೆ ಮತ ನೀಡಿದ್ರೆ ಕರ್ನಾಟಕ ಅಭಿವೃದ್ಧಿಗೆ ಬ್ರೇಕ್ ಬೀಳುತ್ತದೆ. ಇದನ್ನೆಲ್ಲಾ ತಡೆಯಲು ಇರುವುದು ಒಂದೇ ದಾರಿ. ಡಬಲ್​ ಇಂಜಿನ್ ಬಿಜೆಪಿ ಸರ್ಕಾರಕ್ಕೆ ನೀವು ವೋಟ್ ಹಾಕಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಂಡವಾಳ ಹೂಡಿಕೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಮೋದಿ ಅಬ್ಬರಿಸಿದರು.

ಜೆಡಿಎಸ್‌ ಪ್ರೈವೇಟ್ ಲಿಮಿಟೆಡ್ ಪಕ್ಷ

ರಾಜ್ಯ ಜೆಡಿಎಸ್ ಕುಟುಂಬ ರಾಜಕೀಯದ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ಜೆಡಿಎಸ್‌ ಪಕ್ಷ ಪ್ರೈವೇಟ್ ಲಿಮಿಟೆಡ್ ಪಕ್ಷ. ಕರ್ನಾಟಕದ ಜೆಡಿಎಸ್ ಪಕ್ಷ ಕೇವಲ ಒಂದು ಕುಟುಂಬಕ್ಕಾಗಿ ಮಾತ್ರ ಇದೆ. ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ಎಂದು ಟೀಕಿಸಿದರು.

Exit mobile version