Site icon PowerTV

ಜನ ಸೇವೆಗೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಋಣಿ : ಸಚಿವ ಗೋಪಾಲಯ್ಯ

ಬೆಂಗಳೂರು : ಅಬಕಾರಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರು ತಮ್ಮ ಮತಕ್ಷೇತ್ರದ ಜೆ.ಸಿ ನಗರದಲ್ಲಿ ಇಂದು ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.

ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಕ್ಷೇತ್ರದ ಜನರನ್ನು ಹಸಿವಿನಿಂದ ಮುಕ್ತಗೊಳಿಸಲು ಕೋವಿಡ್ ಅವಧಿಯಲ್ಲಿ ಆಹಾರ ಕಿಟ್ ಮತ್ತು ಆರೋಗ್ಯ ಕಿಟ್ ಗಳನ್ನು ವಿತರಿಸಲಾಯಿತು ಎಂದು ಹೇಳಿದರು.

ಕೋವಿಡ್ ಸಮಯದಲ್ಲಿ ಎಲ್ಲಾ ಜನಸಾಮಾನ್ಯರಿಗೆ ಲಸಿಕೆಗಳು, ಮಾತ್ರೆಗಳು, ಅಕ್ಸಿಜನ್ ಸಿಲಿಂಡರ್ ಗಳನ್ನು ಒದಗಿಸಲಾಗಿದೆ. ಕ್ಷೇತ್ರದಲ್ಲಿ ಎಲ್ಲರಿಗೂ ಉತ್ತಮ ಆಶ್ರಯವನ್ನು ನೀಡಲಾಗಿದೆ. ಇದರ ಫಲವಾಗಿ ಕ್ಷೇತ್ರದ ಜನರು ಶಾಸಕನಾಗಿ, ಸಚಿವನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವ ಕೆ.ಗೊಪಾಲಯ್ಯ ತಿಳಿಸಿದರು.

ಇದನ್ನೂ ಓದಿ : ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಸಹಕಾರಿ : ಸಚಿವ ಗೋಪಾಲಯ್ಯ

ಕೊರೋನಾ ಮುಕ್ತಕ್ಕೆ ಕಟಿಬದ್ಧನಾಗಿದ್ದೆ

ನನ್ನ ಉಸ್ತುವಾರಿ ಜಿಲ್ಲೆ ಮೈಸೂರು ಜಿಲ್ಲೆಯನ್ನು ಕೊರೋನಾ ಮುಕ್ತ ಮಾಡಲು ನಾನು ಕಟಿಬದ್ಧನಾಗಿದ್ದೆ. ಕೊರೋನ ಸಂದರ್ಭದಲ್ಲಿ, ಮನೆ ಮನೆಗೆ ವೈದ್ಯಕೀಯ ಸೇವೆ ತಲುಪಿಸಲು 10 ನೂತನ ಕೋವಿಡ್ -19 ಮೊಬೈಲ್ ಕ್ಲಿನಿಕ್ ವ್ಯವಸ್ಥೆಯನ್ನು ಹೊಂದಿರುವ ಮೊಬೈಲ್ ವ್ಯಾನ್ ಗಳ ಸೇವೆ ಒದಗಿಸಲಾಗಿತ್ತು ಎಂದು ತಮ್ಮ ಕಾರ್ಯವನ್ನು ಪ್ರಸ್ತಾಪಿಸುತ್ತಾ ಜನರ ಬಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ ನರೇಂದ್ರಬಾಬು, ಡಾ.ಗಿರೀಶ್ ನಾಶಿ, ರೈಲ್ವೆ ನಾರಾಯಣ್, ಸುರಭಿ ನಾಗರಾಜು ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Exit mobile version