Saturday, August 23, 2025
Google search engine
HomeUncategorizedಧೀರಜ್ ಗೆ ವೋಟು ನೀಡಿದ್ರೆ 'ಪ್ರಧಾನಿ ಮೋದಿಗೇ ಮತ' ನೀಡಿದಂತೆ : ಆರ್. ಅಶೋಕ್

ಧೀರಜ್ ಗೆ ವೋಟು ನೀಡಿದ್ರೆ ‘ಪ್ರಧಾನಿ ಮೋದಿಗೇ ಮತ’ ನೀಡಿದಂತೆ : ಆರ್. ಅಶೋಕ್

ಬೆಂಗಳೂರು : ಧೀರಜ್ ಮುನಿರಾಜ್ ಗೆ ನೀವು ವೋಟು ನೀಡಿದ್ರೆ ಪ್ರಧಾನಿ ನರೇಂದ್ರ ಮೋದಿಗೆ ಮತ ನೀಡಿದಂತೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಅವರ ಪರ ಕಂದಾಯ ಸಚಿವ ಆರ್.ಅಶೋಕ್ ಇಂದು ಚನ್ನವೀರನಹಳ್ಳಿಯಲ್ಲಿ ಮತಯಾಚನೆ ಮಾಡಿದರು.

ಪ್ರಚಾರದ ನಡುವೆ ಪವರ್ ವಿತ್ ಲೀಡರ್ ತಂಡದ ಜೊತೆ ಮಾತನಾಡಿರುವ ಆರ್. ಅಶೋಕ್ ಅವರು, ಮತದಾರರು ನೀಡುವ ಪ್ರತಿಯೊಂದು ಮತ ಪ್ರಧಾನಿ ನರೇಂದ್ರ ಮೋದಿ, ಆರ್, ಅಶೋಕ್, ಬಿಜೆಪಿ ಪಕ್ಷಕ್ಕೆ ಮತ್ತು ಧೀರಜ್ ಮುನಿರಾಜುಗೆ ನೀಡಿದಂತೆ ಎಂದು ಬಣ್ಣಿಸಿದರು.

ಧೀರಜ್ ಮುನಿರಾಜ್ ಯುವ ವಿದ್ಯಾವಂತರು. ಯುವಕರಿಗಾಗಿ ವಿನೂತನ ಯೋಜನೆ ಮತ್ತು ರಾಷ್ಟ್ರವನ್ನು ಸದೃಢಗೊಳಿಸುವುದಕ್ಕಾಗಿ ಮತ ನೀಡಬೇಕು. ಧೀರಜ್ ಕ್ಷೇತ್ರದ ಮತದಾರರ ನಾಡಿ ಮಿಡಿತ ಚೆನ್ನಾಗಿ ಅರಿತಿದ್ದಾರೆ. ಇಲ್ಲಿ ಬಿಜೆಪಿ ಎರಡು ಬಾರಿ ಗೆಲುವು ಸಾಧಿಸಿದೆ. ಈ ಬಾರಿಯೂ ಬಿಜೆಪಿಗೆ ಮತದಾರರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ‘ನನ್ನ ತಮ್ಮ ಧೀರಜ್’ ಶಾಸಕನಾಗುವುದು ನಿಶ್ಚಿತ : ಸಿ.ಟಿ ರವಿ ವಿಶ್ವಾಸ

ನೀರು ಕೇಳಿದ್ರೆ ಬಾರ್ ಕೊಡ್ತಾರೆ

ನೀರು ಕೇಳಿದ್ರೆ ಹಾಲಿ ಶಾಸಕರು ಬಾರ್ ಕೊಡ್ತಾರೆ, ಇಂತವರು ಬೇಕಾ? ಅದಕ್ಕಾಗಿ ಯುವಕರಿಗೆ ಮತ ನೀಡಿ. ಧೀರಜ್ ಎಂಜಿನಿಯರಿಂಗ್ ಪದವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಖಂಡಿತಾ ಆಗಲಿದೆ. ಕಾಂಗ್ರೆಸ್ ನವರು ನೀಡುವ ಗ್ಯಾರೆಂಟಿಗಳಿಗೆ ಮರುಳಾಗಬೇಡಿ ಎಂದು ಧೀರಜ್ ಮುನಿರಾಜು ಪರ ಸಚಿವ ಆರ್. ಅಶೋಕ್ ಮತ ಬೇಟೆ ನಡೆಸಿದರು.

ಅಶೋಕ್ ಆದರ್ಶ ನನಗೆ ಸ್ಫೂರ್ತಿ

ಅದಕ್ಕೂ ಮುನ್ನ ಗ್ರಾಮಸ್ಥರನ್ನು ಉದ್ದೇಶಿಸಿ ಭಾಷಣ ಮಾಡಿದ ಅಭ್ಯರ್ಥಿ ಧೀರಜ್ ಮುನಿರಾಜ್ ಅವರು, ಆರ್.ಅಶೋಕ್ ಮಾದರಿಯಲ್ಲಿ ಕೆಲಸ ಮಾಡಬೇಕಾಗಿದೆ‌. ಕೋವಿಡ್ ಸಮಯದಲ್ಲಿ ಆಸ್ಪತ್ರೆ ನಿರ್ಮಾಣ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಸಾರಿಗೆ ಇಲಾಖೆಯ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿರುವ ನಾಯಕರು ನನ್ನ ಗುರು ಆರ್. ಅಶೋಕ್ ಅವರ ಆದರ್ಶಗಳು ನನಗೆ ಸ್ಫೂರ್ತಿ. ಹಾಗಾಗಿ, ಬದಲಾವಣೆಗಾಗಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಮತ ನೀಡಿ ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments