Site icon PowerTV

ಡಿಕೆಶಿ ನೋಡಿದ್ರೆ ಯಾರು ವೋಟ್ ಹಾಕುತ್ತಾರೆ : ಅಶ್ವತ್ಥನಾರಾಯಣ ಲೇವಡಿ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪವರ್ ಟಿವಿ ಜೊತೆ ಮಾತನಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರನ್ಮು ನೋಡಿದ್ರೆ ಯಾರು ವೋಟ್ ಹಾಕುತ್ತಾರೆ. ಅವರನ್ನು‌ನೋಡಿದ್ರೆ ಯಾರಾದರೂ ಕಾಂಗ್ರೆಸ್ ಅಧ್ಯಕ್ಷ ಅಂತಾ ಹೇಳೋದಕ್ಕೆ ಆಗುತ್ತಾ? ಎಂದು ಲೇವಡಿ ಮಾಡಿದ್ದಾರೆ.

ಡಿಕೆಶಿ ಅವರು ಇನ್ನೊಂದಷ್ಟು ಬೀದಿಗಳಲ್ಲಿ ಓಡಾಡಲಿ. ಅವರು ಓಡಾಡಿದಷ್ಟೂ ಬಿಜೆಪಿಗೆ ಅನುಕೂಲ. ಇನ್ಮು ಅವರ ಪ್ರಣಾಳಿಕೆ, ಗ್ಯಾರಂಟಿಗಳನ್ನು ಜನ ‌ನಂಬುತ್ತಾರಾ? ಯಾರು ಯಾರು ಬಿಜೆಪಿಯಲ್ಲಿ ರಿಜೆಕ್ಟ್ ಆಗುತ್ತಾರೋ ಅವರನ್ನೆಲ್ಲಾ ಕರೆದುಕೊಂಡು ಹೋಗಿ ಅಭ್ಯರ್ಥಿ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿಗೆ ಅಶ್ವತ್ಥನಾರಾಯಣ ಟಕ್ಕರ್ ಕೊಟ್ಟಿದ್ದಾರೆ.

ಇದನ್ನೂ ಓದಿ : ‘ಬಿಜೆಪಿ ಪೂರ್ಣ ಬಹುಮತ’ದಿಂದ ಅಧಿಕಾರಕ್ಕೆ ಬರುವುದು ಖಚಿತ : ಸಚಿವ ಅಶ್ವತ್ಥನಾರಾಯಣ

ಜನರ ಪ್ರೀತಿಗೆ ಹೃದಯ ತುಂಬಿ ಬರುತ್ತಿದೆ

ಮಲ್ಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ವೈಯಾಲಿಕಾವಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಪ್ರಚಾರ ನಡೆಸಿದರು. ಮನೆ ಮನೆಯಲ್ಲೂ ಅಶ್ವತ್ಥನಾರಾಯಣ ಅವರಿಗೆ ಮಹಿಳೆಯರು ಆರತಿ ಮಾಡಿ ದೃಷ್ಟಿ ತೆಗೆದು ಸ್ವಾಗತ ಕೋರಿದರು.

ಮಲ್ಲೇಶ್ವರ ಕ್ಷೇತ್ರದಲ್ಲಿ ಜನರ ಅಭಿಮಾನ ನೋಡಿ ತಮಗೆ ಹೃದಯ ತುಂಬಿ ಬರುತ್ತಿದೆ. ಜನ ಇಲ್ಲಿ ಅಭ್ಯರ್ಥಿಗಿಂತ ಮನೆ ಮಗ ಎಂದು ಪರಿಗಣಿಸಿದ್ದಾರೆ. ಮತ್ತೊಂದು ಕಡೆಯಲ್ಲಿ ಪ್ರಧಾನಿ ನರೇಂದ್ರ‌ಮೋದಿಯವರು ಇಡೀ ಕ್ಷೇತ್ರದ ಮನೆ‌ಮನಗಳನ್ನು ತುಂಬಿದ್ದಾರೆ. ಇದರಿಂದ ಗೆಲ್ಲುವ ವಿಶ್ವಾಸ ಮತ್ತಷ್ಟು ಹೆಚ್ಚಿದೆ ಎಂದು ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.

Exit mobile version