Site icon PowerTV

ಇಂದು ‘ದಾಸ ದರ್ಶನ್’ ರೋಡ್ ಶೋ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು : ರಾಜ್ಯ ವಿಧಾಸಭಾ ಚುನಾವಣೆ ಫೀವರ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಬ್ಬರದ ಪ್ರಚಾರ, ಆಶ್ವಾಸನೆಗಳು ಮತ್ತು ಆರೋಪ-ಪ್ರತ್ಯಾರೋಪಗಳಿಳು ನಡೆಯುತ್ತಿದೆ. ಈ ನಡುವೆಯೇ ಬಿಜೆಪಿಯ ಸ್ಟಾರ್​ ಪ್ರಚಾರಕರು ರಾಜ್ಯಾದ್ಯಂತ ಸುತ್ತಿ ಮತ ಶಿಕಾರಿ ನಡೆಸಿದ್ದಾರೆ.

ಈ ಪ್ರಚಾರಕ್ಕೆ ಸ್ಯಾಂಡಲ್ ವುಡ್ ಸ್ಟಾರ್​​​ ನಟರೂ ಕೂಡ ಕೈ ಜೋಡಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪರವಾಗಿ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥ್ಯಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ. ಇದೀಗ ನಟ ದರ್ಶನ್ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಿದ್ದಾರೆ.

ನಟ ದರ್ಶನ್ ಇಂದು (ಏ.28) ಕೋಲಾರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ನಡೆಸಲಿದ್ದಾರೆ.

ಇದನ್ನೂ ಓದಿ : ‘ಕೌರವ ಪಾಟೀಲ್’ ಪರ ನಟ ಸುದೀಪ್ ಅಬ್ಬರದ ಪ್ರಚಾರ

ದರ್ಶನ್ ಪ್ರಚಾರದ ವೇಳಾಪಟ್ಟಿ​​

ಮೊದಲು ಕೋಲಾರ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿರುವ ನಟ ದರ್ಶನ್ ತೂಗುದೀಪ ಅವರು ಕೆಜಿ ಎಫ್, ಬಂಗಾರಪೇಟೆ, ಕೋಲಾರ, ಮಾಲೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ (ವಿಜಯಪುರ), ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ.

Exit mobile version