Site icon PowerTV

ಆರ್​ಸಿಬಿಗೆ ಬೃಹತ್ ಟಾರ್ಗೆಟ್ : ಕೆಕೆಆರ್ ಬಗ್ಗುಬಡಿಯುತ್ತಾರಾ ಕೊಹ್ಲಿ ಬಾಯ್ಸ್?

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಕೆಕೆಆರ್ ತಂಡ 5 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿದೆ. ಆ ಮೂಲಕ ಆರ್​ಸಿಬಿ ಗೆಲುವಿಗೆ 201 ರನ್​ಗಳ ಬೃಹತ್ ಗುರಿ ನೀಡಿದೆ.

ಟಾಸ್ ಸೊತು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಪರ ರಾಯ್ (56), ನಿತೀಶ್ ರಾಣಾ (48), ಜದಗೀಶನ್ (27) ವೆಂಕಟೇಶ್ ಅಯ್ಯರ್(31), ರಿಂಕು ಸಿಂಗ್(18*) ಮತ್ತು ವೈಸ್ (12*) ರನ್ ಗಳಿಸಿದರು.

ಆರ್​ಸಿಬಿ ಬೌಲರ್ ಶಹಬಾಜ್ ಎಸೆದ 6ನೇ ಓವರ್‌ನಲ್ಲಿ ಕೆಕೆಆರ್​ನ ರಾಯ್ 1, 6, 6, 6, 0, 6 ರನ್ ದೋಚಿದರು. ಕೊನೆಯ 5 ಓವರ್‌ನಲ್ಲಿ ಕೆಕೆಆರ್ 70 ರನ್ ಕಲೆಹಾಕಿತು. ಆರ್​ಸಿಬಿ ಪರ ಕನ್ನಡಿಗ ವೈಶಾಕ್, ಹಸರಂಗ ತಲಾ 2 ವಿಕೆಟ್ ಪಡೆದರೆ, ಸಿರಾಜ್ 1 ವಿಕೆಟ್ ಗಳಿಸಿದರು.

ಇದನ್ನೂ ಓದಿ : Wow : ಆರ್​ಸಿಬಿ ಕಪ್ ಹಿಡಿದ ಅಮೂಲ್ಯ ಅವಳಿ ಮಕ್ಕಳು : ಇಲ್ಲಿವೆ ಕ್ಯೂಟ್ ಫೋಟೋಗಳು

ಆರ್‌ಸಿಬಿ ತಂಡ

ವಿರಾಟ್ ಕೊಹ್ಲಿ (ನಾಯಕ), ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಡೇವಿಡ್ ವಿಲ್ಲಿ, ವೈಶಾಕ್ ವಿಜಯಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

ಕೆಕೆಆರ್ ತಂಡ

ನಿತೀಶ್ ರಾಣಾ (ನಾಯಕ), ವೆಂಕಟೇಶ್ ಅಯ್ಯರ್, ನಾರಾಯಣ್ ಜಗದೀಶನ್, ಜೇಸನ್ ರಾಯ್, ಸುನಿಲ್ ನರೈನ್, ಆಂಡ್ರೆ ರಸೆಲ್, ರಿಂಕು ಸಿಂಗ್, ಡೇವಿಡ್ ವೀಸಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ

Exit mobile version