ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಭಿ ಚಿತ್ರ ಬಿಡುಗಡೆಯಾಗಿ 20 ವರ್ಷ ಆಗಿದೆ.ಮೋಹಕ ತಾರೆ ರಮ್ಯಾ ಅವರ ಮೊದಲ ಚಿತ್ರವೂ ಹೌದು, ಇದಕ್ಕೆ ಸಂತಸ ವ್ಯಕ್ತಪಡಿಸಿರುವ ರಮ್ಯಾ ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ.ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ಸದಾ ಚಿರಋಣಿ ಮತ್ತು ನನ್ನ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಹೌದು, ಇನ್ನೂ ರಮ್ಯಾ 20 ವರ್ಷಗಳ ಹಿಂದಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾನದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮೊದಲ ಸಿನಿಮಾ ಅಭಿ ರಿಲೀಸ್ ಆದಾಗಿನ ಫೋಟೋಗಳಿವು. ಈ ಫೋಟೋಗಳನ್ನು ತೆಗೆದ ಕ್ಷಣಗಳ ನೆನಪು ಇಂದಿಗೂ ಹಸಿರಾಗಿದೆ ಎಂದಿದ್ದಾರೆ.
ನಟಿ ರಮ್ಯಾ ಸಾಮಾಜಿಕ ಜಾಲತಾನದಲ್ಲಿ 4 ಫೋಟೋಗಳನ್ನು ಶೇರ್ ಮಾಡಿ ಅದರೊಂದಿಗೆ ಭಾವುಕ ಬರಹವೊಂದನ್ನು ಶೇರ್ ಮಾಡಿದ್ದಾರೆ. ಮೊದಲ ಫೋಟೋ ಸೈಂಟ್ ಜೋಸೆಫ್ ಕಾಲೇಜ್ನಲ್ಲಿ ತೆಗೆದಿದ್ದು. ಸುಮ್ ಸುಮ್ನೆ ಸಾಂಗ್ ಶೂಟಿಂಗ್ ಸಮಯದ್ದು ಎಂದಿದ್ದಾರೆ.
ಎರಡನೇ ಫೋಟೋ ಚಿಕ್ಕಮಗಳೂರು ಶೂಟಿಂಗ್ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ಈ ನನ್ನ ಕಣ್ಣನೆ ಹಾಡಿಗಾಗಿ ನಾವು ಶೂಟಿಂಗ್ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.
ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.
ಈ ಸಿನಿಮಾ ಸಿನಿಮಾ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತ್ತು. ಬಾಕ್ಸ್ ಆಫೀಸಿನಲ್ಲಿ ಉತ್ತಮ ಗಳಿಕೆ ಕೂಡಾ ಮಾಡಿತ್ತು.
ನನ್ನ ಮೊದಲ ಚಿತ್ರ ,ಅಪ್ಪು ಅವರ ಜೊತೆಗಿನ ‘ಅಭಿ’ ಬಿಡುಗಡೆ ಆಗಿ ಇಂದಿಗೆ 20 ವರ್ಷಗಳು.
ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ.ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ಸದಾ ಚಿರಋಣಿ ಮತ್ತು ನನ್ನ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು . pic.twitter.com/X3nwXlbM3c— Ramya/Divya Spandana (@divyaspandana) April 25, 2023