Site icon PowerTV

ಬಿಜೆಪಿ ಪರ ಇಂದು ಕಿಚ್ಚ ಸುದೀಪ್ ಅಬ್ಬರದ ಪ್ರಚಾರ ಹೀಗಿದೆ ಕಿಚ್ಚನ ಶೆಡ್ಯೂಲ್ ..?

ರಾಜ್ಯ ವಿಧಾನಸಸಭಾ ಚುನಾವಣೆಗೆ ಇನ್ನೂ 14 ದಿನಗಳು ಮಾತ್ರ ಬಾಕಿ ಉಳಿದಿದ್ದು, ಚುನಾವಣಾ ಪ್ರಚಾರಕ್ಕೆ ಸ್ಟಾರ್​ ಪ್ರಚಾರಕರು ಅಖಾಡದ ಕಣಕ್ಕೆ ಇಳಿದಿದ್ದಾರೆ.

ಹೌದು, ನಟ ಕಿಚ್ಚ ಸುದೀಪ್ ಇಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಈಗಲೇ ವೇಳಾ ಪಟ್ಟಿಯನ್ನು ಸಿದ್ದಪಡಿಸಿರುವ ಬಿಜೆಪಿ,ಕಿಚ್ಚನ ಓಡಾಟಕ್ಕೆ ಹೆಲಿಕಾಪ್ಟರ್ ಕೂಡ ವ್ಯವಸ್ಥೆಮಾಡಿದೆ.

ಹೀಗಿರಲಿದೆ ಕಿಚ್ಚನ ಶೆಡ್ಯೂಲ್

1. ಬೆಳಗ್ಗೆ 10.50ಕ್ಕೆ ಚಿತ್ರದುರ್ಗದ ಮೊಳಕಾಲೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.

2 10.55-11.40ರವರೆಗೆ ಮೊಳಕಾಲೂರು ಅಭ್ಯರ್ಥಿ ಎಸ್. ತಿಪ್ಪೆಸ್ವಾಮಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

3. 12.30-1.15ರವರೆಗೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಪರ ರೋಡ್‌ಶೋನಲ್ಲಿ ಭಾಗವಹಿಸಲಿದ್ದಾರೆ.

4. ಮದ್ಯಾಹ್ನ 3.10-350ರವರೆಗೆ ಮಾಯಕೊಂಡದ ಸರ್ಕಾರಿ ಕಾಲೇಜು ಮೈದಾನದಲ್ಲಿ ಮಾಯಕೊಂಡ ಅಭ್ಯರ್ಥಿ ಬಸವರಾಜ ನಾಯಕ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಡಲಿದ್ದಾರೆ.

5. ಸಂಜೆ 4.20ರಿಂದ 5.00ರವರೆಗೆ ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ್ ಮತ್ತು ಬಿ.ಜೆ. ಅಜಯ್ ಕುಮಾರ್ ಪರ ರೋಡ್ ಶೋ ನಡೆಸಲಿದ್ದಾರೆ.

6. ಸಂಜೆ 6.10ರಿಂದ 710ರವರೆಗೆ ಬಳ್ಳಾರಿಯ ಸಂಡೂರಿನಲ್ಲಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರ ರೋಡ್‌ ಶೋ ನಡೆಸಲಿದ್ದಾರೆ.

 

 

Exit mobile version