Site icon PowerTV

ಸೋಮಣ್ಣ ಮ್ಯಾಚ್ ಫಿಕ್ಸಿಂಗ್? : ‘ದಳಪತಿ’ಗೆ ಗೂಟದ ಕಾರಿನ ಆಫರ್ ಕೊಟ್ಟಿದ್ದೇಕೆ?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಅದರಲ್ಲೂ ಚುನಾವಣಾ ದಿನಾಂಕ ಹತ್ತಿರ ಬಂದಂತೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ರೀತಿಯ ತಂತ್ರ ಹೆಣೆಯುತ್ತಿದ್ದಾರೆ.

ಹೌದು, ತಮ್ಮ ಎದುರಾಳಿಗಳನ್ನು ಎದುರಿಸಿಲು ಅಭ್ಯರ್ಥಿಗಳು ರಣತಂತ್ರ ರೂಪಿಸುತ್ತಿದ್ದಾರೆ. ಇದೀಗ ಚಾಮರಾಜನಗರದಿಂದ ಸ್ಪರ್ಧಿಸುತ್ತಿರುವ ಸಚಿವ ವಿ. ಸೋಮಣ್ಣ ಮ್ಯಾಚ್ ಫಿಕ್ಸಿಂಗ್‌ಗೆ ಮುಂದಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ನಿನಗೆ ಅನುಕೂಲ ಮಾಡಿಕೊಡ್ತೀನಿ

ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ವಾಮಿ ಅಲಿಯಾಸ್ ಆಲೂರು ಮಲ್ಲುಗೆ ವಿ.ಸೋಮಣ್ಣ ಕಾಲ್ ಮಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗುತ್ತಿದೆ. ಆಡಿಯೋದಲ್ಲಿ ನಾಮಪತ್ರ ವಾಪಸ್ ತಗೋ, ನಿನಗೆ ಅನುಕೂಲ ಮಾಡಿಕೊಡ್ತೀನಿ ಅಂತ ಹೇಳಲಾಗಿದೆ.

ಇದನ್ನೂ ಓದಿ : ‘ಕನ್ನಡಿಗರಿಗೆ ಅಮಿತ್ ಶಾ ಅವಮಾನ’ : ಸ್ವಾಭಿಮಾನಿಗಳನ್ನು ಬಡಿದೆಬ್ಬಿಸಿದ ಸಿದ್ದು

ವಿ.ಸೋಮಣ್ಣ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಚಾಮರಾಜನಗರದಿಂದ ಸ್ಪರ್ಧಿಸುತ್ತಿರುವ ವಿ. ಸೋಮಣ್ಣ ಅಲ್ಲಿನ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್ ಜೊತೆ ಫಿಕ್ಸಿಂಗ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಗೂಟದ ಕಾರು ಕೊಡಿಸುತ್ತೇನೆ  

ಸೋಮಣ್ಣ ಆಡಿಯೋ ಬಗ್ಗೆ ರಾಜ್ಯಾ ಕಾಂಗ್ರೆಸ್ ಲೇವಡಿ ಮಾಡಿದೆ. ಬಿಜೆಪಿಯ ಹರಕೆಯ ಕುರಿಯಾಗಿರುವ ಸೋಮಣ್ಣ ಎರಡೂ ಕಡೆ ಬಲಿಯಾಗುವ ಭಯದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯಲ್ಲಿ ಕೈ ಮುಗಿಯುತ್ತೇನೆ ನಾಮಪತ್ರ ವಾಪಸ್ ತಗೊ, ಗೂಟದ ಕಾರು ಕೊಡಿಸುತ್ತೇನೆ  ಎಂದು ಬೇಡುತ್ತಾ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಬಿಜೆಪಿಗೆ ಅಡ್ಜಸ್ಟ್ಮೆಂಟ್ ರಾಜಕಾರಣವಿಲ್ಲದೆ ಗೆಲ್ಲುವ ಧೈರ್ಯ ಇಲ್ಲವೇಕೆ? ಎಂದು ಛೇಡಿಸಿದೆ.

Exit mobile version