Site icon PowerTV

ನಾಳೆ ‘ಕರುನಾಡಲ್ಲಿ ಯೋಗಿ’ ಹವಾ : ಸಕ್ಕರೆ ನಾಡಲ್ಲಿ ಕೇಸರಿ ಕಲಿಗಳ ಪರ ‘ಮತ ಶಿಕಾರಿ’

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಕಣ ಕಾವೇರುತ್ತಿದ್ದು, ಬಿಜೆಪಿ ಪರ ಪ್ರಚಾರಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸುತ್ತಿದ್ದಾರೆ. ನಾಳೆ ಸಕ್ಕರೆ ನಾಡು ಮಂಡ್ಯದಲ್ಲಿ ರೋಡ್‌ ಶೋ, ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯ ಭೇಟಿ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮಂಡ್ಯಕ್ಕೆ ಆಮಿಸುತ್ತಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರು ನಾಗಮಂಗಲ ತಾಲೂಕು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ, ಮಂಡ್ಯಕ್ಕೆ ಆಗಮಿಸುವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕರುನಾಡಲ್ಲಿ ಮೋದಿ ಮೆಗಾ ರ್ಯಾಲಿಗೆ ಪ್ಲ್ಯಾನ್ : ನಿಮ್ಮ ಊರಿಗೆ ಬರಲಿದ್ದಾರೆ ನಮೋ?

ಹೀಗಿರಲಿದೆ ಯೋಗಿ ಹವಾ

Exit mobile version