Site icon PowerTV

ಗುಡ್ ನ್ಯೂಸ್ : ಸೆಲೆಬ್ರಿಟಿಗಳ ಟ್ವಿಟರ್ ಖಾತೆಗೆ ಮತ್ತೆ ಬ್ಲೂ ಟಿಕ್

ನವದೆಹಲಿ: ಸೆಲೆಬ್ರಿಟಿಗಳ ಟ್ವಿಟ್ಟರ್ ಖಾತೆಗೆ ಮತ್ತೆ ಬ್ಲೂ ಟಿಕ್ ನೀಡಲಾಗಿದೆ. ಪ್ರಮುಖ ರಾಜಕಾರಣಿಗಳು, ಕ್ರಿಕೆಟಿಗರು, ಉದ್ಯಮಿಗಳು ಹಾಗೂ ಗಣ್ಯರ ಅಧಿಕೃತ ಖಾತೆಗಳ ಬ್ಲೂ ಟಿಕ್ ತೆಗೆದು ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟ್ವಿಟರ್, ಸೆಲೆಬ್ರಿಟಿಗಳ ಖಾತೆಗೆ ಬ್ಲೂ ಟಿಕ್ ನೀಡಿದೆ.

ರಾಹುಲ್ ಗಾಂಧಿ, ಅಮಿತಾಬ್ ಬಚ್ಚನ್, ರಜನಿಕಾಂತ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ, ಮಲಾಲಾ ಯೂಸುಫ್‌ಜಾಯ್ ಅವರ ಖಾತೆಯ ಬ್ಲೂ ಟಿಕ್ ಕೂಡ ತೆಗೆದುಹಾಕಲಾಗಿತ್ತು.

ಬ್ಲೂಟಿಕ್ ಮರಳಿ ಪಡೆದ ಸೆಲೆಬ್ರಿಟಿಗಳು

ಬಾಲಿವುಡ್‌ ನಟರಾದ ಶಾರುಕ್‌ ಖಾನ್‌, ಸಲ್ಮಾನ್‌ ಖಾನ್‌, ಸಿಂಗರ್​ ಎಆರ್ ರೆಹಮಾನ್​, ಕ್ರಿಕೆಟಿಗ ವಿರಾಟ್​ ಕೊಹ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಕೆಲವು ಐಪಿಎಲ್ ತಂಡಗಳ ಅಧಿಕೃತ ಟ್ವಿಟರ್​ ಖಾತೆಗಳ ಬ್ಲೂ ಟಿಕ್ ಮಾರ್ಕ್​ ಕಾಣೆಯಾಗಿತ್ತು. ಆದರೆ ಇಂದು ಈ ಎಲ್ಲರ ಖಾತೆಗಳಿಗೂ ಬ್ಲೂ ಟಿಕ್ ಮರಳಿ ಪಡೆದುಕೊಂಡಿವೆ.

ಸತ್ತವರ ಖಾತೆಗಳಿಗೂ ಮರಳಿದ ಬ್ಲೂ ಟಿಕ್

ಈಗಾಗಲೇ ಮೃತಪಟ್ಟಿರುವ ಸೆಲಿಬ್ರಿ‌ಟಿಗಳಾದ ಮೈಕಲ್‌ ಜಾಕ್ಸನ್‌, ಸೇರಿದಂತೆ ಹಲವರ ಖಾತೆಗಳಿಗೂ ಅದು ಮರಳಿದೆ. ಪತ್ರಕರ್ತ ಜಮಾಲ್ ಖಶೋಗಿ, ನಟ ಚಾಡ್ವಿಕ್ ಬೋಸ್ಮನ್, ಹಾಸ್ಯನಟ ನಾರ್ಮ್ ಮ್ಯಾಕ್ಡೊನಾಲ್ಡ್, ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ ಹಾಗೂ ಭಾರತದ ನಟ ಸುಶಾಂತ್ ಸಿಂಗ್ ರಜಪೂತ್​ ಅವರ ಟ್ವಿಟರ್ ಪ್ರೊಫೈಲ್​ಗಳಿಗೂ ಬ್ಲೂ ಟಿಕ್ ಮರಳಿದೆ.

 

 

Exit mobile version