Site icon PowerTV

ನಾಮಪತ್ರ ವಾಪಸ್​ ಪಡೆಯಲು ಇಂದೇ ಕೊನೆ ದಿನ

ಬೆಂಗಳೂರು : ಎಲೆಕ್ಷನ್ ನಡೆಯಲು ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಚುನಾವಣಾ ಅಭ್ಯರ್ಥಿಗಲು ಈಗಲೇ ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳು ಚುನಾವಣೆಯ ಕಣದಿಂದ ಹೊರಹೋಗಲು ಇಂದೇ ಮಾತ್ರ ಅವಕಾಶವಿದೆ. ತಮ್ಮ ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆದಿನವಾಗಿದೆ.

ಹೌದು. ರಾಜ್ಯ ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಈವರೆಗೆ 3130 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಇಂದು ಚುನಾವಣಾ ಆಯೋಗವು ಉಮೇದುವಾರಿಕೆ ಹಿಂಪಡೆಯಲು ಇಂದು ಸಂಜೆಯವರೆಗೆ ಕಾಲಾವಕಾಶ ನೀಡಿದೆ. ಒಟ್ಟು ಅಭ್ಯರ್ಥಿಗಳ ಪೈಕಿ ಎಷ್ಷು ಮಂದಿ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಕಾದುನೋಡಬೆಕಿದೆ.ಬಂಡಾಯ ಶಮನವಾಗಿರುವ ಕೆಲವರು ಹಿಂದೆ ಸರಿಯುವ ಲಕ್ಷನವಿದ್ದು, ಸಂಜೆಯ ವೇಳೆಗೆ ಸಂಪೂರ್ಣವಾಗಿ ತಿಳಿಯಲಿದೆ.

Exit mobile version