Site icon PowerTV

ಗುಂಡ್ಲುಪೇಟೆಯಲ್ಲಿ ಅಮಿತ್‌ ಶಾ ಮೆಗಾ ರೋಡ್‌ ಶೋ

ಗುಂಡ್ಲುಪೇಟೆ: ಚುನಾವಣೆ ಹೊಸ್ತಲಿನಲ್ಲಿ ರಾಷ್ಟ್ರೀಯ ನಾಯಕರು ರಾಜಕೀಯಕ್ಕೆ ಆಗಮಿಸುತ್ತಿದ್ದಾರೆ.ಹೌದು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್​ ಶಾ ಇಂದು ಗುಂಡ್ಲುಪೇಟೆಯಲ್ಲಿ BJP ಅಭ್ಯರ್ಥಿ C.S.ನಿರಂಜನ್ ಕುಮಾರ್ ಪರ ಪ್ರಚಾರ ನಡೆಸಲಿದ್ದು, ಗುಂಡ್ಲುಪೇಟೆಯಲ್ಲಿ 1.5 ಕಿ.ಮೀ. ರೋಡ್ ಶೋ ಬಿ ಶೋನಲ್ಲಿ ಭಾಗಿಯಾಗಿದ್ದಾರೆ.

ಹೌದು, ಇಂದು ಅಮಿತ್ ಶಾ ರೋಡ್‌ ಶೋ ಹಾಗೂ ಬಿಜೆಪಿ ನಾಯಕರ ಜತೆಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ 9.40ಕ್ಕೆ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಅವರು, ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡಿದ್ದು. ಮತ್ತೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಹೆಲಿಕಾಪ್ಟರ್‌ ಮೂಲಕ ಗುಂಡ್ಲುಪೇಟೆಗೆ ತರಳಿದ್ದಾರೆ.

ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು, ದೇವರಾಜು ಅರಸು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಿಂದ ಮೈಸೂರು-ಊಟಿ ಹೆದ್ದಾರಿಯಲ್ಲಿ ಹಳೇ ಬಸ್‌ ನಿಲ್ದಾಣದವರೆಗೆ ತೆರೆದ ವಾಹನದಲ್ಲಿ ರೋಡ್‌ ಶೋದಲ್ಲಿ ಅಮಿತ್​ ಶಾ ಭಾಗಿಯಾಗಲಿದ್ದಾರೆ.

Exit mobile version