Site icon PowerTV

ಆರ್​ಸಿಬಿಗೆ 7 ರನ್‌ಗಳ ರೋಚಕ ಜಯ, ಮ್ಯಾಕ್ಸ್​ವೆಲ್ ವಿಶೇಷ ದಾಖಲೆ

ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ರನ್‌ಗಳ ರೋಚಕ ಜಯ ದಾಖಲಿಸಿದೆ.

190 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್, ಜೈಸ್ವಾಲ್ (47), ಪಡಿಕ್ಕಲ್ (52), ಸಂಜು ಸಾಮ್ಸನ್ (22) ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ, ಆರ್‌ಸಿಬಿ ಬೌಲರ್‌ಗಳು ಅವರನ್ನು ನಿರ್ಣಾಯಕ ಸಮಯದಲ್ಲಿ ಕಟ್ಟಿಹಾಕಿದರು.

ಇದಕ್ಕೂ ಮೊದಲು ಟಾಸ್ ಸೋತ ಬೆಂಗಳೂರಿಗೆ ಬ್ಯಾಟಿಂಗ್‌ ಮಾಡಿತು. ರಾಜಸ್ಥಾನ್ ಬೌಲರ್ ಬೌಲ್ಟ್ ಮೊದಲ ಓವರ್​ನ ಮೊದಲ ಬಾಲಿನಲ್ಲೇ ಶಾಕ್ ನೀಡಿದರು. ಮೊದಲ ಎಸೆತದಲ್ಲೇ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆದರು. ನಾಯಕ ಕೊಹ್ಲಿ ಔಟಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡು ಪ್ಲೆಸಿಸ್ ಸ್ಫೋಟಕ ಆಟ ಆಡಿದರು. ಮ್ಯಾಕ್ಸ್‌ವೆಲ್ 77 ರನ್ ಹಾಗೂ ಡು ಪ್ಲೆಸಿಸ್ 62 ರನ್ ಸಿಡಿಸಿ ಮಿಂಚಿದರು.

ಮ್ಯಾಕ್ಸ್​ವೆಲ್ ವಿಶೇಷ ದಾಖಲೆ

ರಾಜಸ್ಥಾನ ವಿರುದ್ಧ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್​ವೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 77 ರನ್​ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಆರ್​ಸಿಬಿ ಪರ 1000 ರನ್ ಕಲೆಹಾಕಿದ ವಿಶೇಷ ಸಾಧಕರ ಪಟ್ಟಿಗೂ ಗ್ಲೆನ್ ಮ್ಯಾಕ್ಸ್​ವೆಲ್ ಸೇರ್ಪಡೆಯಾದರು. ಆರ್​ಸಿಬಿ ಪರ ಇದುವರೆಗೆ ಕೇವಲ 5 ಬ್ಯಾಟರ್​ಗಳು ಮಾತ್ರ ಸಾವಿರ ರನ್​ ಕಲೆಹಾಕಿದ್ದಾರೆ.

Exit mobile version